ರಾಷ್ಟ್ರೀಯ

ಪ್ರಪಾತಕ್ಕೆ ಉರುಳಿದ ಪ್ರವಾಸಕ್ಕೆ ಹೊರಟ್ಟಿದ್ದ ಬಸ್: ಉಪನ್ಯಾಸಕರು ಸೇರಿ 30 ಮಂದಿ ದುರ್ಮರಣ

Pinterest LinkedIn Tumblr

ರಾಯ್‌ಗಢ(ಮಹಾರಾಷ್ಟ್ರ): ಚಂದ್ರಗ್ರಹಣದ ಬೆನ್ನಲ್ಲೇ ಡಪೋಲಿ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕರು ಸೇರಿದಂತೆ 40 ಮಂದಿ ಪ್ರವಾಸಕ್ಕೆ ಹೊರಟ್ಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದಿದ್ದು ಪರಿಣಾಮ ಉಪನ್ಯಾಸಕರು ಸೇರಿದಂತೆ 30 ಮಂದಿ ದಾರುಣ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ರಾಯಗಢದ ಅಂಬೆನಾಲಿ ಘಾಟ್ ಬಳಿ ಬಸ್ ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿದೆ. ಪರಿಣಾಮ ಸ್ಥಳದಲ್ಲೇ 30 ಮಂದಿ ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.

ಎನ್‌ಡಿಆರ್‌ಎಫ್ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಸ್ ನಲ್ಲಿ 25 ಉಪನ್ಯಾಸಕರು ಸೇರಿದಂತೆ 40 ಮಂದಿ ಪ್ರಯಾಣಿಸುತ್ತಿದ್ದರು. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

Comments are closed.