ರಾಷ್ಟ್ರೀಯ

ಧರ್ಮ ಉಳಿಸಲು ಹಿಂದೂ ದಂಪತಿ 5 ಮಕ್ಕಳನ್ನು ಹೆರಬೇಕು: ಬಿಜೆಪಿ ಶಾಸಕ

Pinterest LinkedIn Tumblr


ಹೊಸದಿಲ್ಲಿ: ಹಿಂದುತ್ವ ಉಳಿಯ ಬೇಕೆಂದರೆ ಹಿಂದೂ ದಂಪತಿಗಳು ಕನಿಷ್ಠ 5 ಮಕ್ಕಳನ್ನು ಹೆರಬೇಕು ಎಂದು ಸಲಹೆ ನೀಡುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿಸಲು ಪ್ರತಿಯೊಂದು ಹಿಂದೂ ದಂಪತಿ ಕನಿಷ್ಠ 5 ಮಕ್ಕಳನ್ನು ಹೆರುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ, ಭಗವಾನ್ ಶ್ರೀರಾಮನೇ ಭೂಮಿಗೆ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸುರೇಂದ್ರ ಸಿಂಗ್ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲದೆ,’ಭಾರತ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು’ ಎಂದು ಹೇಳುವ ಮೂಲಕ ಕೂಡ ವಿವಾದ ಸೃಷ್ಟಿಸಿದ್ದರು.

Comments are closed.