ಅಂತರಾಷ್ಟ್ರೀಯ

ಆಸ್ಟ್ರೇಲಿಯಾ: ಡೇಟಿಂಗ್ ಗೆಳತಿ ಮನೆಗೆ ಭೇಟಿ ನೀಡಿದ್ದ ಭಾರತೀಯ ವಿದ್ಯಾರ್ಥಿ ಹತ್ಯೆ

Pinterest LinkedIn Tumblr


ಮೆಲ್ಬೋರ್ನ್​: ಡೇಟಿಂಗ್​ ಸೈಟ್​ ಮೂಲಕ ಪರಿಚಯವಾಗಿದ್ದ ಯುವತಿಯ ಭೇಟಿಯ ನಂತರ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಕೊಲೆಯಾಗಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದಿದೆ.

ಮೌಲಿನ್​ ರಾಥೋಡ್​ ಮೃತ ದುರ್ದೈವಿ, ಅಕೌಂಟಿಂಗ್​ ವಿದ್ಯಾರ್ಥಿಯಾಗಿರುವ ಈತ ತೀವ್ರ ಹಲ್ಲೆಗೊಳಗಾಗಿ ಕಳೆದ ರಾತ್ರಿ ಸ್ಥಳೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸೋಮವಾರ ರಾತ್ರಿ ಯುವತಿಯ ಮನೆಯ ಬಳಿ ಗಂಭೀರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ಮೌಲಿನ್​ ಪತ್ತೆಯಾಗಿದ್ದ.

ಪಶ್ಚಿಮ ಮೆಲ್ಬೋರ್ನ್​ನ ಸನ್​ಬರಿ ಸಬರ್ಬ್​ನಲ್ಲಿರುವ 19 ವರ್ಷದ ಯುವತಿಯ ಮನೆಗೆ ಮೌಲಿನ್​ ಸೋಮವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಭೇಟಿ ನೀಡಿದ್ದ. ಈ ವೇಳೆ ತುರ್ತು ಸೇವೆಗೆ ಕರೆ ಬಂದಾಗ ಸ್ಥಳಕ್ಕೆ ಹೋಗಿ ನೋಡಿದಾಗ ಮೌಲಿನ್​ ಗಂಭೀರ ಗಾಯಗೊಂಡಿರುವ ಸ್ಥಿತಿಯಲ್ಲಿದ್ದ.

ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಯುವತಿಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ನರಮೇಧ ಅಥವಾ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ಕಳೆದ ರಾತ್ರಿ ಯುವತಿಯು ಮೆಲ್ಬೋರ್ನ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದು, ಮತ್ತಷ್ಟು ವಿಚಾರಣೆಗಾಗಿ ಪೊಲೀಸ್​ ಕಸ್ಟಡಿಯಲ್ಲಿ ಇರಿಸಿದ್ದಾರೆ.

ಸ್ನೇಹಿತ ಲವ್​ಪ್ರೀತ್​ ಸಿಂಗ್​ ಪ್ರಕಾರ ಮೃತ ರಾಥೋಡ್​ ಒಬ್ಬನೇ ಮಗನಾಗಿದ್ದ. ವಿದ್ಯಾಭ್ಯಾಸಕ್ಕಾಗಿ ನಾಲ್ಕು ವರ್ಷದ ಹಿಂದೆಯೇ ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿದ್ದ. ಈ ಘಟನೆ ತಿಳಿದ ನಂತರ ಪಾಲಕರು ದಿಗ್ಭ್ರಮೆಗೆ ಒಳಗಾಗಿದ್ದಾರೆ.

ಆತ ಒಳ್ಳೆಯ ವ್ಯಕ್ತಿ, ಕ್ರಿಕೆಟ್​ ಪ್ರೇಮಿ ಹಾಗೂ ಸದಾ ಸಂತೋಷದಿಂದ ಇರುವ ಪ್ರವೃತ್ತಿ ಉಳ್ಳವನಾಗಿದ್ದ. ವಿನಮ್ರ ಸ್ವಭಾವ ಹೊಂದಿದ್ದ ಆತ ವಿದ್ಯಾಭ್ಯಾಸದಲ್ಲಿ ಕಠಿಣ ಶ್ರಮ ಪಡುತ್ತಿದ್ದ ಎಂದು ಲವ್​ಪ್ರೀತ್​ ತಿಳಿಸಿದ್ದಾರೆ.

Comments are closed.