ರಾಷ್ಟ್ರೀಯ

ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಶಾಲೆಗೆ ಹೋಗಲು ಹೆಲಿಕಾಪ್ಟರ್‌ ಕಳಿಸಿ ಎಂದು ವಿದ್ಯಾರ್ಥಿನಿ ಪತ್ರ

Pinterest LinkedIn Tumblr


ಮಥುರಾ: ಶಾಲೆಗೆ ತೆರಳಲು ಹೆಲಿಕಾಪ್ಟರ್‌ ಅಥವಾ ಬೋಟಿನ ವ್ಯವಸ್ಥೆ ಮಾಡಿಕೊಡುವಂತೆ 8ನೇ ತರಗತಿ ವಿದ್ಯಾರ್ಥಿನಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾಳೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿನ ಮರ್ಹಾಲ ಗ್ರಾಮದ ಭಾವನಾ, ಸಿಎಂ ಆದಿತ್ಯನಾಥ್‌ಗೆ ಪತ್ರ ಬರೆದ ಹುಡುಗಿ.

ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಜಾರಿಗೊಳಿಸಿದೆ. ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರವನ್ನೂ ನೀಡುತ್ತಿದ್ದಾರೆ. ಆದರೆ ಮಥುರಾದ ಅನೇಕ ಭಾಗಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ಕಷ್ಟವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

ಗ್ರಾಮದಲ್ಲಿ ಸರಿಯಾದ ರಸ್ತೆಯಾಗುವವರೆಗೆ, ಶಾಲೆಗೆ ಹೋಗಲು ಅಗತ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದ್ದು, ಸಾಧ್ಯವಾಗುದಾದರೆ, ಶಾಲೆಗೆ ತೆರಳಲು ಹೆಲಿಕಾಪ್ಟರ್‌ನ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ.

ಭಾವನ ಬರೆದ ಪತ್ರ

ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಷ್ಟೇ ಇದ್ದು, ಕಲಿಕೆಗಾಗಿ ಹತ್ತಿರದ ಹಸನ್ಪುರ್‌ ಗ್ರಾಮಕ್ಕೆ ತೆರಳಬೇಕಾಗುತ್ತದೆ. ಇಲ್ಲಿಗೆ ಸೂಕ್ತ ರಸ್ತೆ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಸಾಕಷ್ಟು ದುಸ್ಥರವಾಗುತ್ತಿದೆ. ಸರಕಾರ ಈ ಎಲ್ಲ ವಿಚಾರ ತಿಳಿದಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾವನಳ ಪತ್ರಕ್ಕೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಮಥುರಾ ಸುತ್ತಮುತ್ತವೂ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.

Comments are closed.