ರಾಷ್ಟ್ರೀಯ

ಡಿವೋರ್ಸ್ ನೋಟಿಸ್ ಕಳುಹಿಸಿದ್ದ ಪತ್ನಿಯನ್ನು ರೈಲಿನಡಿಗೆ ದೂಡಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ!

Pinterest LinkedIn Tumblr


ಕೋಲ್ಕತಾ: ಡಿವೋರ್ಸ್ ನೋಟಿಸ್ ಕಳುಹಿಸಿದ್ದ ಪತ್ನಿಯನ್ನು ರೈಲಿನಡಿಗೆ ನೂಕಿ ತಾನೂ ಸಾಯಲು ಯತ್ನಿಸಿದ ವ್ಯಕ್ತಿ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪಶ್ಚಿಮ ಬಂಗಾಳದ ತಿತಾಗಢ್‌ ರೈಲ್ವೇ ನಿಲ್ದಾಣದಲ್ಲಿ ಈ ಪ್ರಕರಣ ವರದಿಯಾಗಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡ ದಂಪತಿಯನ್ನು ಮೊಯಿನುದ್ದೀನ್ ಮತ್ತು ಅಫ್ಸಾನ ಎಂದು ಗುರುತಿಸಲಾಗಿದೆ. ಇಬ್ಬರೂ ಆರ್‌ ಜಿ ಕಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಮೊಯಿನುದ್ದೀನ್ ಎರಡೂ ಕಾಲು ತುಂಡಾಗಿದ್ದರೆ, ಪತ್ನಿ ಅಫ್ಸಾನ ಕಾಲು ಜಖಂಗೊಂಡಿದೆ. ಮೊಯಿನುದ್ದೀನ್ ಅಫ್ಸಾನಳನ್ನು 2016ರಲ್ಲಿ ಮದುವೆಯಾಗಿದ್ದ, ಆಕೆಗೆ ಅದು ಎರಡನೇ ಮದುವೆಯಾಗಿದ್ದು, ಮೊದಲ ಪತಿಯಿಂದ ಒಂದು ಮಗುವಿದೆ. ಮೊಯಿನುದ್ದೀನ್ ಮದುವೆಯಾದ ನಂತರ ಮತ್ತೊಂದು ಮಗುವಾಗಿದ್ದು, ಇಬ್ಬರು ಮಕ್ಕಳೊಂದಿಗೆ ದಂಪತಿ ವಾಸಿಸುತ್ತಿದ್ದರು.

ಆದರೆ ಮೊಯಿನುದ್ದೀನ್ ಕುಡಿತದ ಚಟ ಹೊಂದಿದ್ದು, ಪತ್ನಿಗೆ ಹೊಡೆಯುತ್ತಿದ್ದ. ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಹೋಗಿ ಮೊಯಿನುದ್ದೀನ್‌ಗೆ ಡಿವೋರ್ಸ್ ನೀಡಿದ್ದಳು.

ಡಿವೋರ್ಸ್ ನೋಟಿಸ್ ಕಂಡು ಕೋಪಗೊಂಡಿದ್ದ ಮೊಯಿನುದ್ದೀನ್, ಅಫ್ಸಾನಳನ್ನು ಹುಡುಕಿಕೊಂಡು ಬಂದಿದ್ದ. ಆಕೆಯನ್ನು ತಿತಾಗಢ್ ರೈಲ್ವೆ ನಿಲ್ದಾಣದಲ್ಲಿ ಕಂಡು ಮನವೊಲಿಸಲು ಮುಂದಾಗಿದ್ದ. ಆದರೆ ಆಕೆ ಒಪ್ಪದೇ ಇದ್ದಾಗ ಆಕೆಯನ್ನು ರೈಲಿನಡಿಗೆ ದೂಡಿ, ತಾನೂ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Comments are closed.