ರಾಷ್ಟ್ರೀಯ

ನಿಮ್ಮ ರೈಲು ಪ್ರಯಾಣದ ಮಾಹಿತಿ ವಾಟ್ಸಪ್ ನಲ್ಲೇ ಸಿಗುತ್ತದೆ!

Pinterest LinkedIn Tumblr


ನವದೆಹಲಿ:ರೈಲ್ವೆ ಪ್ರಯಾಣದ ಮಾಹಿತಿಯನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಟ್ರಾವೆಲ್ ಪೋರ್ಟಲ್ ಮೇಕ್ ಮೈ ಟ್ರಿಪ್ ಜೊತೆ ಕೈಜೋಡಿಸಿದೆ. ಇದರಿಂದಾಗಿ ನೀವು ಕುಳಿತಲ್ಲಿಯೇ ವಾಟ್ಸಪ್ ಮೂಲಕವೇ ರೈಲು ಸಂಚಾರದ ಮಾಹಿತಿಯನ್ನು ಪಡೆಯಬಹುದಾಗಿದೆ.!

ರೈಲು ಬರುವ ಹಾಗೂ ತಲುಪುವ ಮಾಹಿತಿಯನ್ನು ಪಡೆಯಲು ಪ್ರಯಾಣಿಕರು ಕೆಲವು ಸಾಧಾರಣವಾದ ಕ್ರಮಗಳನ್ನು ಅನುಸರಿಸಿದರೆ ಸಾಕು..ನಿಮಗೆ ಕುಳಿತಲ್ಲೇ ಮಾಹಿತಿ ಲಭ್ಯ.

ಅನುಸರಿಸಬೇಕಾದ ಕ್ರಮ:

*ನಿಮ್ಮ ಮೊಬೈಲ್ ನಲ್ಲಿ 7349389104 ನಂಬರ್ ಅನ್ನು ಸೇವ್ ಮಾಡಿಕೊಳ್ಳಿ

*ಈಗ ವಾಟ್ಸಪ್ ಓಪನ್ ಮಾಡಿ ಮತ್ತು ನಿಮ್ಮ ಸಂಚಾರದ ರೈಲಿನ ಸಂಖ್ಯೆ ನಮೂದಿಸಿ

*ಫೋನ್ ನಲ್ಲಿ ಸೇವ್ (7349389104) ಮಾಡಿಕೊಂಡ ನಂಬರ್ ಗೆ ಮೆಸೇಜ್ ಕಳುಹಿಸಿ

*ನಿಮ್ಮ ಸಂದೇಶ ಸ್ವೀಕರಿಸುವವರೆಗೆ ಕಾಯಿರಿ

*ನಿಮ್ಮ ಮಾಹಿತಿ ಸ್ವೀಕಾರ ಆದ ಕೂಡಲೇ ನೀವು ನಿಮ್ಮ ಪ್ರಯಾಣದ ರೈಲಿನ ವಿವರ ಪಡೆಯಲಿದ್ದೀರಿ.

*ಕೇವಲ ಕೆಲವೇ ಸೆಕೆಂಡ್ಸ್ ಗಳಲ್ಲಿ ನಿಮ್ಮ ಪ್ರಯಾಣದ ರೈಲಿನ ವಿವರ ನಿಮಗೆ ಸಿಗಲಿದೆ..

Comments are closed.