ರಾಷ್ಟ್ರೀಯ

ರಾಹುಲ್ ಪ್ರಧಾನಿಯಾಗಲು ನನ್ನ ಅಭ್ಯಂತರವಿಲ್ಲಳ: ದೇವೇಗೌಡ

Pinterest LinkedIn Tumblr


ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಲು ತಮಗೇ ಯಾವುದೇ ತಕರಾರಿಲ್ಲ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಡಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮಹಾಮೈತ್ರಿಯ ನಾಯಕತ್ವ ವಹಿಸಲು ರಾಹುಲ್ ಗಾಂಧಿ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ ನಾವು ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಗೆ ಹೊರತಾಗಿ ಸುಮಾರು 280 ಸೀಟುಗಳನ್ನು ಗೆಲ್ಲುವುದು ವಿಪಕ್ಷ ಮೈತ್ರಿಯ ಗುರಿ ಎಂದರು.

ರಾಹುಲ್ ಗಾಂಧಿ ಪ್ರಧಾನಿಯಾಗಲು ಸಹ ತಮ್ಮ ತಕರಾರರು ಇಲ್ಲ ಎಂದ ಅವರು, ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ದೇಶದಲ್ಲಿ ಕನಿಷ್ಟ 280 ಸ್ಥಾನಗಳನ್ನು ಗಳಿಸಬೇಕಿದೆ. ಇದಕ್ಕೆ ವಿವಿಧ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕಿದೆ. ಹಲವು ಪ್ರದೇಶಗಳಲ್ಲಿ ಮೈತ್ರಿ ಪಕ್ಷಗಳು ಕಳೆದ ಬಾರಿ ಸೋತಿದ್ದರೂ ಸಹ ಮಂದಿನ ಚುನಾವಣೆ ವೇಳೆಗೆ ಜಯ ಸಾಧಿಸುವತ್ತ ನಡೆಯಬಹುದು. ಚುನಾವಣೆ ಸಾಕಷ್ಟು ಸಮಯವಿದೆ ಆ ವೇಳೆಗೆ ಸಾಕಷ್ಟು ಬೆಳವಣಿಗೆ ಆಗುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ವಿಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ವ್ಯರ್ಥ ಪ್ರಯತ್ನವೇನಲ್ಲ ಎಂದು ಹೇಳಿರುವ ಎಚ್‍ಡಿಡಿ, ನಮ್ಮ ಬಳಿ ಸಂಖ್ಯಾಬಲ ಇಲ್ಲ ಎಂಬುದು ಗೊತ್ತಿತ್ತು. ಆದರೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಯತ್ನ ಮಾಡಿದ್ದೇವೆ. ಜೆಡಿಎಸ್ ಸಹ ಅವಿಶ್ವಾಸದ ಪರ ಮತ ಚಲಾಯಿಸಿದ್ದೇವೆ. ಆದರೆ ಇದರಲ್ಲಿ ಸೋತ್ತಿದ್ದರು ಸಹ ಕೆಲವರು ಈ ವೇಳೆ ದೂರವುಳಿದ್ದರು. ಎಲ್ಲವೂ ಮುಂದಿನ ದಿನಗಳಲ್ಲಿ ಸ್ಪಷ್ಟವಾಗುತ್ತದೆ. ಸಾಧ್ಯ ಈ ಕುರಿತು ಯಾವುದೇ ಊಹೆ ಮಾಡುವುದು ಬೇಡ ಎಂದು ಹೇಳಿದರು.

Comments are closed.