ರಾಷ್ಟ್ರೀಯ

ಮುಖ್ಯಮಂತ್ರಿ ಕುಮಾರಸ್ವಾಮಿ ಕಡೆಗೆ ಕಟು ಮಾತು ತಿರುಗಿಸಿದ ಸುಬ್ರಮಣಿಯನ್‌ ಸ್ವಾಮಿ

Pinterest LinkedIn Tumblr


ನವದೆಹಲಿ: ತಮ್ಮ ವಿವಾದಿತ ಹೇಳಿಕೆಗಳ ಮೂಲಕವೇ ದೇಶಾದ್ಯಂತ ಸದಾ ಚರ್ಚೆಯಲ್ಲಿರುವ ಬಿಜೆಪಿ ನಾಯಕ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರ ಮಾತು ಈಗ ಕರ್ನಾಟಕ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಕಡೆಗೆ ತಿರುಗಿದೆ. ” ಕುಮಾರಸ್ವಾಮಿ ಅವರು ಹೆಚ್ಚು ದಿನ ನೋವು ಪಡಬೇಕಾದ ಅಗತ್ಯವಿಲ್ಲ. ಸಮಸ್ಯೆಗಳು ಬೇಗ ಬಗೆಹರಿಯಲಿವೆ,” ಎಂದು ಅವರು ಹೇಳಿಕೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಾನು ವಿಷವುಂಡು ಅಮೃತ ನೀಡುತ್ತಿದ್ದೇನೆ. ಒಂದು ವರ್ಗ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದೆ ಎನ್ನುವ ಮೂಲಕ ಇತ್ತೀಚೆಗೆ ಜೆಡಿಎಸ್​ ಪಕ್ಷದ ಸಮಾರಂಭವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದ ಕುಮಾರಸ್ವಾಮಿ ಅವರಿಗೆ ಸ್ವಾಮಿ ಅವರು ಮಾರ್ಮಿಕವಾಗಿ ಈ ಮಾತು ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎನ್​ಐಗೆ ಜತೆ ಮಾತನಾಡಿರುವ ಸ್ವಾಮಿ ” ಮುಖ್ಯಮಂತ್ರಿ ಆಗಬೇಕೆಂಬ ಕುಮಾರಸ್ವಾಮಿ ಅವರ ಕನಸು ನಿಜವಾಗಿದೆ. ಆದರೆ ಅವರು ದೀರ್ಘ ಕಾಲದ ವರೆಗೆ ಸಂತೋಷದಿಂದ ಇರಲು ಸಾಧ್ಯವಿಲ್ಲ. ಅತಿ ಶೀಘ್ರದಲ್ಲೇ ಎಲ್ಲವೂ ಬದಲಾಗಲಿದೆ. ಒಂದು ವೇಳೆ ಅಮಿತ್​ ಶಾ ಅವರು ನನ್ನನ್ನು ಕರ್ನಾಟಕಕ್ಕೆ ಕಳುಹಿಸಿ ಸರ್ಕಾರ ರಚನೆ ಮಾಡುವಂತೆ ಸೂಚಿಸಿದರೆ ನಾನು ಸಂತೋಷವಾಗಿ ಆ ಕೆಲಸ ಮಾಡುತ್ತೇನೆ” ಎಂದಿದ್ದಾರೆ.

” ಹೀಗಾಗಿ ಕಾಂಗ್ರೆಸ್​ ಪಕ್ಷ ಹತಾಶೆಗೊಂಡಿದೆ. ವಿರೋಧ ಪಕ್ಷಗಳ್ಯಾವುವೂ ಅವರ ಜತೆಗಿಲ್ಲ. ಅದೇ ಕಾರಣಕ್ಕೇ ಅದು ದೊಡ್ಡ ಸಮಸ್ಯೆಗೆ ಸಿಲುಕಿದೆ. ಕರ್ನಾಟಕದಲ್ಲಿ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಸನ್ನಿವೇಶ ಹೇಗೆ ಬದಲಾಯಿತು ಎಂಬುದನ್ನು ಜನ ನೋಡಿದ್ದಾರೆ. ಕಾಂಗ್ರೆಸ್​ ನಾಯಕರು ಒಂದು ಕಡೆ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ. ಒಂದು ಕಡೆ ಮುಸ್ಲಿಮರನ್ನು ಬೆಂಬಲಿಸುವುದಾಗಿ ಘೋಷಿಸುತ್ತಾರೆ. ಇದೇ ಕಾರಣಕ್ಕೆ ಅವರು ಅಪಮಾನಕ್ಕೆ ಗುರಿಯಾಗುತ್ತಿದ್ದಾರೆ,” ಎಂದರು.

Comments are closed.