ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ಕಾಂಗ್ರೆಸ್ ನಾಯಕರ ವಿರುದ್ಧ ದೂರು

Pinterest LinkedIn Tumblr


ಪಣಜಿ : ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಕಾರಣಕ್ಕೆ ಗೋವಾ ಕಾಂಗ್ರೆಸ್‌ ಮಹಿಳಾ ವಿಭಾಗದ ಮುಖ್ಯಸ್ಥೆ. ಉಪ ಮುಖ್ಯಸ್ಥೆ ಮತ್ತು ಇತರ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಗೋವಾ ಜಿಲ್ಲೆಯ ನೇತ್ರಾವಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನಿಂದ ಅತ್ಯಾಚಾರಕ್ಕೆ ಗುರಿಯಾಗಿದ್ದ 17ರ ಬಾಲಕಿಯ ಗುರುತನ್ನು ಆವರು ಬಹಿರಂಗಪಡಿಸಿದ್ದಾರೆಂದು ಆರೋಪಿಸಿ ಶಿವಸೇನೆಯ ಗೋವಾ ಘಟಕದ ಉಪಾಧ್ಯಕ್ಷೆ ರಾಖೀ ಪ್ರಭುದೇಸಾಯಿ ನಾಯಕ್‌ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು.

ಗೋವೆಯ ಮಹಿಳಾ ಪೊಲೀಸ್‌ ಠಾಣೆಯು ಇಂದು ರಾಜ್ಯ ಕಾಂಗ್ರೆಸ್‌ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿರುವ ಪ್ರತಿಮಾ ಕುಟಿನೋ, ಉಪಾಧ್ಯಕ್ಷೆ ಸಾವಿತ್ರಿ ಕವಳೇಕರ್‌, ನೇತ್ರಾವಳಿ ಗ್ರಾಮ ಪಂಚಾಯತ್‌ ಉಪ ಸರಪಂಚ ಅಭಿಜಿತ್‌ ದೇಸಾಯಿ ಮತ್ತು ಪಂಚ ಸದಸ್ಯರಾದ ವಿಟ್ಟಲ ಗಾಂವ್‌ಕರ್‌ ಮತ್ತು ಪ್ರಕಾಶ್‌ ಭಗತ್‌ ವಿರುದ್ಧ ಎಫ್ಐಆರ್‌ ದಾಖಲಿಸಿತು.

Comments are closed.