ರಾಷ್ಟ್ರೀಯ

ಪಣಜಿ: ಮಂಗೇಶಿ ದೇವಳ ಅರ್ಚಕರಿಂದ ಲೈಂಗಿಕ ಕಿರುಕುಳ?

Pinterest LinkedIn Tumblr


ಪಣಜಿ : ದಕ್ಷಿಣ ಗೋವೆಯ ಶ್ರೀ ಮಂಗೇಶಿ ದೇವಸ್ಥಾನದ ಅರ್ಚಕರೊಬ್ಬರು ಪ್ರಕೃತ ಅಮೆರಿಕದಲ್ಲಿರುವ ಮೂಲತಃ ಗೋವೆಯವರಾದ ಇಬ್ಬರು ಮಹಿಳೆಯರಿಗೆ ದೇವಾಲಯದ ಒಳಗೇ ಲೈಂಗಿಕ ಕಿರುಕುಳ ನೀಡಿರುವರೆಂಬ ಆರೋಪ ಕೇಳಿ ಬಂದಿದೆ.

ಮಂಗೇಶಿ ದೇವಾಲಯವು ಒಳಪಡುವ ಪೊಂಡಾ ಪೊಲೀಸ್‌ ಠಾಣೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ತಮಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ದೇವಸ್ಥಾನ ಮಂಡಳಿಯವರು ಸಂತ್ರಸ್ತ ಮಹಿಳೆಯರಿಂದ ಲಿಖೀತ ದೂರು ಸ್ವೀಕರಿಸಿರುವುದನ್ನು ದೃಢೀಕರಿಸಿದ್ದಾರೆ.

ಲೈಂಗಿಕ ಕಿರುಕುಳದ ಈ ಘಟನೆ ಕಳೆದ ಜೂ.14 ಮತ್ತು 22ರಂದು ನಡೆದಿದೆ ಎನ್ನಲಾಗಿದೆ. ಇಬ್ಬರೂ ಮಹಿಳೆಯರು ತಮ್ಮ ದೂರಿನಲ್ಲಿ ಒಬ್ಬನೇ ಅರ್ಚಕನ ಹೆಸರನ್ನು ಉಲ್ಲೇಖೀಸಿದ್ದಾರೆ. ಈ ಆರೋಪಗಳ ಬಗ್ಗೆ ಅದಿಕೃತ ತನಿಖೆಯಾಗಬೇಕು ಎಂದು ಗೋವೆಯ ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗಾವಡೆ ಆಗ್ರಹಿಸಿದ್ದಾರೆ.

Comments are closed.