ರಾಷ್ಟ್ರೀಯ

ಕೋಮಾದಲ್ಲಿದ್ದ ತಾಯಿಗೆ ಜೀವ ನೀಡಿದ ನವಜಾತ ಶಿಶು ! ಹಲವರನ್ನು ಬೆರಗುಗೊಳಿಸಿದ ಸುದ್ದಿ

Pinterest LinkedIn Tumblr

ತಿರುವನಂತಪುರ: ನವಜಾತ ಶಿಶುವೊಂದು (ಆಗ ತಾನೇ ಹುಟ್ಟಿದ ಮಗು) ಹೆತ್ತ ತಾಯಿಯ ಜೀವವನ್ನೇ ಉಳಿಸಿರುವ ಆಶ್ಚರ್ಯಕರ ಘಟನೆ ಕೇರಳದ ಪೇರೂರಿನಲ್ಲಿ ನಡೆದಿದೆ. ಈ ಹಿನ್ನೆಲೆ ಈ ಸುದ್ದಿ ಹಲವರನ್ನು ಬೆರಗುಗೊಳಿಸಿದೆ.

ಜನವರಿ 2018ರಲ್ಲಿ ಬೆಟಿನಾ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಮೆದುಳಿಗೆ ಗಾಯವಾದ್ದರಿಂದ ಈಕೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಆದರೆ, ಈ ವೇಳೆಗೆ ಬೆಟಿನಾ 3 ತಿಂಗಳ ಗರ್ಭಿಣಿಯಾಗಿದ್ದರು. ನಂತರ ಎರಡು ತಿಂಗಳುಗಳ ಕಾಲ ವೆಂಟಿಲೇಟರ್‌ನಲ್ಲಿದ್ದ ಈಕೆ ಐಸಿಯುಗೆ ದಾಖಲಾಗಿದ್ದರು. ಈ ಹಿನ್ನೆಲೆ ಹುಟ್ಟುವ ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಗೊಂದಲಕ್ಕೀಡಾಗಿದ್ದು, ತಾಯಿಯ ಜೀವವನ್ನು ಉಳಿಸುತ್ತಿರುವ ಮಾತ್ರೆಗಳ ಸೈಡ್ ಎಫೆಕ್ಟ್‌ನಿಂದಾಗಿ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತೊಂದರೆಯಾಗಬಹುದೆಂದು ಸ್ವತ: ವೈದ್ಯರು ಆತಂಕಕ್ಕೀಡಾಗಿದ್ದರು.

ತಾಯಿ ಕೋಮಾದಲ್ಲಿರುವುದರಿಂದ ಈಕೆಯ ಆರೋಗ್ಯದ ತೊಂದರೆಗಳಿಂದ ಮಗುವಿಗೆ ಬರಬಹುದಾದ ರೋಗಗಳ ಬಗ್ಗೆ ಅಥವಾ ವಿರೂಪಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರು. ಆದರೆ, ಅವರಿಗೇ ಅಚ್ಚರಿಯಾಗುವಂತೆ ಬೆಟಿನಾ ದೇಹದಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಾಗಿ ಬೆಳೆಯುತ್ತಿದ್ದು, ಯಾವುದೇ ರೀತಿಯ ತೊಂದರೆಗೆ ಒಳಗಾಗಿರಲಿಲ್ಲ. ನಂತರ, ತಾಯಿಯ ಹೊಟ್ಟೆಯಲ್ಲಿ 37 ವಾರಗಳ ಬಳಿಕ ಇದ್ದ ಗಂಡು ಮಗುವನ್ನು ಜೂನ್ 14ರಂದು ಆಪರೇಷನ್‌ ಮೂಲಕ ಹೊರತೆಗೆಯಲಾಗಿದ್ದು, ಇದಕ್ಕೆ ಎಲ್ವಿನ್ ಎಂದು ಹೆಸರಿಡಲಾಗಿದೆ.

ಇನ್ನು, ಮಗು ಹುಟ್ಟಿದ ಕೂಡಲೇ ಅಚ್ಚರಿಯ ರೀತಿಯಂತೆ ಬೆಟಿನಾ ಕೋಮಾ ಸ್ಥಿತಿಯಿಂದ ಗುಣಮುಖರಾಗಿದ್ದು, ತನ್ನ ಮಗುವನ್ನು ನೋಡಿ ಕೈನಲ್ಲಿ ಸಹ ಹಿಡಿದುಕೊಂಡಿದ್ದಾರೆ. ಹಲವು ತಿಂಗಳುಗಳ ಬಳಿಕ ಇದೇ ಮೊದಲ ಬಾರಿಗೆ ಬೆಟಿನಾ ತನ್ನ ಬೆರಳುಗಳನ್ನು, ಕಣ್ಣುಗಳನ್ನು ಹಾಗೂ ಇಡೀ ದೇಹವನ್ನು ಅಲುಗಾಡಿಸಿದ್ದಾರೆ. ಇಷ್ಟೇ ಅಲ್ಲದೆ, ಮಗು ಹುಟ್ಟಿದ ಬಳಿಕ ತಾಯಿಯ ಆರೋಗ್ಯದಲ್ಲಿ ತೀವ್ರ ಸುಧಾರಣೆ ಕಂಡಿದ್ದು, ಕೇವಲ 10 ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಹಿನ್ನೆಲೆ, ತಾವು ಅಂದುಕೊಂಡಿದ್ದಕ್ಕಿಂತ ಬೇಗ ತಾಯಿ ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು, ಎಲ್ವಿನ್‌ ಸೇರಿ ಬೆಟಿನಾ ಹಾಗೂ ಪತಿ ಅನೂಪ್‌ ದಂಪತಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ.

Comments are closed.