ರಾಷ್ಟ್ರೀಯ

ಕೋಳಿ ಕಳ್ಳ ಎಂಬ ಅನುಮಾನಕ್ಕೆ ಬಂಗಾಳಿ ವ್ಯಕ್ತಿ ಬಲಿ!

Pinterest LinkedIn Tumblr

ಅಂಚಲ್‌: ಕೋಳಿ ಕಳ್ಳ ಎಂಬ ಅನುಮಾನ ಅನ್ಯ ರಾಜ್ಯದ ವ್ಯಕ್ತಿಯೋರ್ವನನ್ನು ಬಲಿ ತೆಗೆದುಕೊಂಡಿದೆ.

ತಿರುವನಂತಪುರದ ಅಂಚಲ್‌ನಲ್ಲಿ ಜೂ.24 ರಂದು ಕೋಳಿ ಕಳ್ಳತನದ ಅನುಮಾನದಲ್ಲಿ ಪಶ್ಚಿಮ ಬಂಗಾಳದ ಮಾನಿಕ್‌ ರಾಯ್‌ (34) ಸಾರ್ವಜನಿಕರು ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡ ಮಾನಿಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜು.16ರಂದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾನಿಕ್‌ ಮೃತಪಟ್ಟಿದ್ದಾನೆ.

ತಿರುವನಂತಪುರದ ಅಂಚಲ್‌ನಲ್ಲಿ ನೆಲೆಸಿದ್ದ ಮಾನಿಕ್‌, ಕೆಲಸ ಮುಗಿಸಿ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ. ಕೋಳಿಯನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಲ ಸ್ಥಳೀಯರು, ಮಾನಿಕ್‌ಗೆ ಮನಬಂದಂತೆ ಥಳಿಸಿದ್ದಾರೆ.

ಮಾನಿಕ್‌ ಸಹಾಯಕ್ಕಾಗಿ ಕೂಗಿದಾಗ, ಸ್ವತಃ ಮಾನಿಕ್‌ಗೆ ಕೋಳಿ ನೀಡಿದವನೇ ಬಂದು ಸಮಜಾಯಿಷಿ ನೀಡಿದರೂ, ಜನರು ಹೊಡೆಯುವುದು ನಿಲ್ಲಿಸಿಲ್ಲ. ಮತ್ತಷ್ಟು ಜನ ಸೇರಿ, ಗಲಾಟೆ ನಿಲ್ಲಿಸಿದ ವೇಳೆ, ಮಾನಿಕ್‌ ಗಂಭೀರ ಗಾಯಗಳಿಂದ ಮೂರ್ಛೆ ಹೋಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಮಾನಿಕ್‌ನನ್ನು ಸ್ಥಳೀಯರಲ್ಲಿ ಕೆಲವರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ರವಾನಿಸುವ ವೇಳೆ, ಮಾನಿಕ್‌ ಮೃತಪಟ್ಟಿದ್ದಾನೆ. ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದ ಕಾರಣ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.