ರಾಷ್ಟ್ರೀಯ

ನೋಟು ನಿಷೇಧ ಸಮಯದಲ್ಲಿ ಓವರ್ ಟೈಮ್ ಕೆಲಸದ ಸಂಬಳವನ್ನು ಹಿಂದಿರುಗಿಸುವಂತೆ 70,000 ಉದ್ಯೋಗಿಗಳಿಗೆ ಸೂಚಿಸಿದ ಎಸ್‌ಬಿಐ

Pinterest LinkedIn Tumblr

ನವದೆಹಲಿ: ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ ಪಡೆದಿದ್ದ ಸಂಬಳವನ್ನು ಹಿಂದಿರುಗಿಸುವಂತೆ ನೋಟು ನಿಷೇಧಕ್ಕೂ ಮುನ್ನ ವಿಲೀನಗೊಂಡಿದ್ದ ಬ್ಯಾಂಕ್ ಗಳ 70 ಸಾವಿರ ಉದ್ಯೋಗಿಗಳಿಗೆ ಸೂಚಿಸಿದೆ.

2016ರ ನವೆಂಬರ್ 14ರಿಂದ 2016ರ ಡಿಸೆಂಬರ್ 30ರವರೆಗೆ ಏಳು ಗಂಟೆಯವರೆಗೂ ಕೆಲಸ ಮಾಡಿದ್ದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಸಂಬಳ ನೀಡಲಾಗಿತ್ತು. ಉದ್ಯೋಗಿಗಳ ಉದ್ಯೋಗರ್ಹತೆಗೆ ಅನುಗುಣವಾಗಿ 15 ಸಾವಿರದಿಂದ 30 ಸಾವಿರ ರುಪಾಯಿವರೆಗೂ ಹೆಚ್ಚುವರಿಯಾಗಿ ಸಂಬಳ ನೀಡಲಾಗಿದ್ದು ಈ ಹಣವನ್ನು ಹಿಂಪಡೆಯುವಂತೆ ಜೋನಲ್ ಬ್ರಾಂಚ್ ಅಧಿಕಾರಿಗಳಿಗೆ ಆದೇಶಿಸಿದೆ.

ನೋಟು ನಿಷೇಧಕ್ಕೂ ಮುನ್ನ 2017ರ ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವನ್ಕೋರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ ಗಳು ಎಸ್ಬಿಐ ಜೊತೆ ವಿಲೀನವಾಗಿದ್ದವು. ಇನ್ನು ನೋಟು ನಿಷೇಧದ ಸಮಯದಲ್ಲಿ ಸುಮಾರು 70 ಸಾವಿರ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಅದಕ್ಕೆ ಹೆಚ್ಚುವರಿ ಸಂಬಳ ನೀಡುವ ಕುರಿತಾಗಿ ಎಸ್ಬಿಐ ಭರವಸೆ ನೀಡಿತ್ತು.

ಅಂತೆ ಇದೀಗ ಹೆಚ್ಚುವರಿಯಾಗಿ 70 ಸಾವಿರ ಉದ್ಯೋಗಿಗಳಿಗೆ ನೀಡಿರುವ ಸಂಬಳವನ್ನು ಹಿಂಪಡೆಯುವಂತೆ ಬ್ರಾಂಚ್ ಅಧಿಕಾರಿಗಳಿಗೆ ಎಸ್ಬಿಐ ಸೂಚಿಸಿದೆ. ಇದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಓವರ್ ಟೈಮ್ ಹೆಚ್ಚುವರಿ ಸಂಬಳ ಎಸ್ಬಿಐ ಉದ್ಯೋಗಿಗಳಿಗೆ ಮಾತ್ರ ನೀಡಲಾಗುವುದು. ವಿಲೀನಗೊಂಡಿರುವ ಬ್ಯಾಂಕ್ ಉದ್ಯೋಗಿಗಳಿಗಲ್ಲ ಎಂದು ಎಸ್ಬಿಐ ಹೇಳಿದೆ.

Comments are closed.