ರಾಷ್ಟ್ರೀಯ

ರೈಲಿನಲ್ಲಿ ಇಬ್ಬರು ಮಹಿಳೆಯರ ಅತ್ಯಾಚಾರ, ಕೊಲೆ!

Pinterest LinkedIn Tumblr


ಗುವಾಹಟಿ: ಅತ್ಯಾಚಾರ ಎಸಗಿ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ರೈಲಿನ ಶೌಚಗೃಹದಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಕಾಸ್‌ ದಾಸ್‌ ಮತ್ತು ಬಿಪಿನ್‌ ಪಾಂಡೆ ಬಂಧಿತರು.

ಮಂಗಳವಾರ ಜೋರ್ಹಾತ್‌ ಜಿಲ್ಲೆಯ ಸಿಮಾಲುಗೂರು ರೈಲ್ವೆ ಸ್ಟೇಷನ್‌ ಬಳಿ ರೈಲಿನ ಶೌಚಗೃಹದಲ್ಲಿ 21 ವರ್ಷದ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು. ಅದೇ ದಿನ ಜೋರ್ಹತ್ ಜಿಲ್ಲೆಯ ಮರಿಯಾನಿ ಸ್ಟೇಷನ್‌ನಲ್ಲಿ ಅವಧ್‌ ಅಸ್ಸಾಂ ಎಕ್ಸ್‌ಪ್ರೆಸ್‌ನ ಗೂಡ್ಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮೃತದೇಹ ಪತ್ತೆಯಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಚಿರಿಂಗ್‌ ಚೋಪರಿ ಪ್ರದೇಶದಲ್ಲಿ ಮೊದಲಿಗೆ ಬಿಕಾಶ್‌ ದಾಸ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಒಪ್ಪಿಕೊಂಡಿದ್ದಾನೆ. ಆನಂತರ ಪಾಂಡೆಯನ್ನು ಬೆಂಗಳೂರಿನಿಂದ ಬಂದಿದ್ದ ರೈಲಿನಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಪ್ರಜ್ಞಾಹೀನರನ್ನಾಗಿಸಿ ಅತ್ಯಾಚಾರ ಎಸಗಲಾಯಿತು. ನಂತರ ಅವರನ್ನು ಕೊಲೆ ಮಾಡಿ ಮೃತ ದೇಹಗಳನ್ನು ರೈಲ್ವೆ ಶೌಚಾಲಯಗಳಲ್ಲಿ ಎಸೆಯಲಾಯಿತು ಎಂದಿದ್ದಾರೆ ಎಂದು ತಿಳಿಸಿದ್ದಾರೆ.

Comments are closed.