ರಾಷ್ಟ್ರೀಯ

ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಸಾವಿನಿಂದ ಪಾರಾಗಲು ಕೊನೆಯ ಯತ್ನ ನಡೆಸಿದ್ದ ಭವ್ನೇಶ್

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಸುದ್ದಿಯಾಗಿದ್ದ ದೆಹಲಿಯ ಬುರಾರಿ ಪ್ರದೇಶದ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರೆದಂತೆ ಒಂದೊಂದೇ ಸತ್ಯಗಳು ಹೊರಬರುತ್ತಿವೆ. ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾದ ಕುಟುಂಬದಲ್ಲಿ ಒಬ್ಬ ಸದಸ್ಯ ಕೊನೇ ಕ್ಷಣದಲ್ಲಿ ಜೀವ ಉಳಿಸಿಕೊಳ್ಳುವ ಯತ್ನ ನಡೆಸಿರಬಹುದೆಂದು ದೆಹಲಿ ಪೊಲೀಸರು ಶಂಕಿಸಿದ್ದು, ಕೊಲೆ ಕೇಸ್ ದಾಖಲಿಸಿಕೊಂಡು ಕ್ರೈಂ ಬ್ರಾಂಚ್​ಗೆ ಪ್ರಕರಣವನ್ನ ವರ್ಗಾಯಿಸಿದ್ದಾರೆ.

ಮೃತರನ್ನ ನಾರಾಯಣ ದೇವಿ(77), ಆಕೆಯ ಮಕ್ಕಳಾದ ಭವ್ನೇಶ್(50), ಲಲಿತ್(45), ಸೊಸೆ ಸವಿತಾ(48), ಟೀನಾ(42), ಮಗಳು ಪ್ರತಿಭಾ(57), ಮೊಮ್ಮಗಳು ಪ್ರಿಯಾಂಕ(33), ನೀತು (25), ಮೋನು(23), ಧೃವ್(15) ಮತ್ತು ಶಿವಂ(15) ಎಂದು ಗುರ್ತಿಸಲಾಗಿದೆ.

ಪೊಲೀಸರು ಮೃತದೇಹಗಳನ್ನ ಇಳಿಸುವ ಸಂದರ್ಭ ಭವ್ನೇಶ್ ಕೈ ಅವನ ಕೊರಳಿನ ಬಳಿ ಇತ್ತು ಎನ್ನಲಾಗಿದೆ. ಹೀಗಾಗಿ, ಭವ್ನೆಶ್ ಕೊನೇ ಕ್ಷಣದಲ್ಲೂ ಬದುಕಲು ಹೋರಾಟ ನಡೆಸಿದ್ದಿರಬಹುದು ಎಂದು ಪೊಲಿಸರು ಶಂಕಿಸಿದ್ದಾರೆ.

ಭವ್ನೇಶ್ ಕೊನೆ ಕ್ಷಣದಲ್ಲಿ ಸಾವಿನಿಂದ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದರು ವಿಧಿ ವಿಜ್ಞಾನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅವರ ಕೈಗಳನ್ನ ಸಹ ಸಡಿಲವಾಗಿ ಕಟ್ಟಿರುವುದು ಕಂಡುಬಂದಿದೆ. ಇದು ಅವರು ಬಿಡಿಸಿಕೊಳ್ಳಲು ನಡೆಸಿರುವ ಪ್ರುಯತ್ನ ಎಂದು ನುರಿತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಪೊಲೀಸರು ತಿಳಿಸಿದ್ಧಾರೆ.

ಪೊಲೀಸರಿಗೆ ಬುರಾರಿ ಮನೆಯಲ್ಲಿ ಸಿಕ್ಕಿರುವ ಕೆಲ ಸಾಕ್ಷ್ಯಗಳು ಕುಟುಂಬ ಸದಸ್ಯರು ವಿಚಿತ್ರ ಆಚರಣೆಯನ್ನ ಮನೆಯಲ್ಲಿ ನಡೆಸಿರುವುದು ಕಂಡುಬಂದಿದೆ. 10 ಮೃತದೇಹಗಳು ನೇಣಿಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅಜ್ಜಿಯ ಮೃತದೇಹ ಮಾತ್ರ ಕೊಠಡಿಯಲ್ಲಿ ಮತ್ತೆಯಾಗಿತ್ತು.

ಮರಣೋತ್ತರ ವರದಿ ಅನ್ವಯ, ಮೃತರ ಪೈಕಿ ನಾರಾಯಣ್, ಭವ್ನೇಶ್ ಮತ್ತು ಪ್ರತಿಭಾ ಭಾಗಶಃ ನೇಣು ಬಿಗಿದು ಸಾವನ್ನಪ್ಪಿದ್ಧಾರೆ.

ಪತ್ತೊಬ್ಬ ಪೊಲಿಸ್ ಅಧಿಕಾರಿ ಹೇಳುವ ಪ್ರಕಾರ, ಭವ್ನೇಶ್ ಬಾಯಿಗೆ ಹಾಕಲಾಗಿದ್ದ ಬಟ್ಟೆ ಮತ್ತು ಟೇಪ್ ಭಾಗಶಃ ತೆಗೆದುಕೊಂಡಿತ್ತು. ಆತನ ಕಾಲುಗಳು ಸಹ ನೆಲ ಮುಟ್ಟಿದ್ದವು. ಈ ಸನ್ನಿವೆಶ ಗಮನಿಸಿದರೆ ಆತ ಸಾವಿನಿಂದ ಪಾರಾಗಲು ಕೂಗಿ ನೆರೆಯವರಿಗೆ ಮಾಹಿತಿ ನೀಡಲು ಯತ್ನಿಸಿದ್ದಾನೆ. ನೇಣಿಗೆ ಪಾರಾಗಲು ನೆಲದ ಮೇಲೆ ನಿಲ್ಲಲು ಭವ್ನೇಶ್ ಯತ್ನಿಸಿದ್ದು, ಈ ಯತ್ನದಲ್ಲಿ ಆತ ಕುಣಿಕೆ ಮತ್ತಷ್ಟು ಬಿಗಿಯಾಗಿದೆ.

ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂಬುದನ್ನ ನೆರೆಮನೆಯ ಯಾರೊಬ್ಬರೂ ಈಗಲೂ ನಂಬಲು ಸಿದ್ಧರಿಲ್ಲ. ಪ್ಲೈವುಡ್ ಮತ್ತು ದಿನಸ ಅಂಗಡಿ ಹೊಂದಿದ್ದ ಕುಟುಂಬ ಸಮಾಜದಲ್ಲಿ ಉತ್ತಮ ಗೌರವ ಹೊಂದಿತ್ತು. ಇದಕ್ಕೂ ಮುನ್ನ ನಡೆದಿದ್ದ ಕುಟುಂಬ ಸದಸ್ಯೆ ಪ್ರಿಯಾಂಕ ನಿಶ್ಚಿತಾರ್ಥದಲ್ಲಿ ಎಲ್ಲರೂ ಅತ್ಯಂತ ಸಂತಸದಿಂದ ಕಳೆದಿದ್ದರು. ಈಗ ಅವರು ಆತ್ಮಹತ್ಯೆ ಶರಣಾಗಿದ್ದಾರೆಂದರೆ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ.

Comments are closed.