ರಾಷ್ಟ್ರೀಯ

ಕುಡಿಯಲು ನೀರು ಕೊಡದ ಮಹಿಳೆಯ ಕೊಲೆ ಯತ್ನ

Pinterest LinkedIn Tumblr

ಪಂಚಕುಲ: ಕುಡಿಯಲು ನೀರು ಕೊಡದಿದ್ದಕ್ಕೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಚುಚ್ಚಿ ಕೊಲ್ಲಲೆತ್ನಿಸಿ ಬೆಚ್ಚಿ ಬೀಳಿಸುವ ಘಟನೆ ನಗರದ ಸೆಕ್ಟರ್ 16ರಲ್ಲಿರುವ ರಾಜೀವ ಗಾಂಧಿ ಕಾಲೋನಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಆರೋಪಿ ಸನ್ನಿ (20) ಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸನ್ನಿ ಶುಕ್ರವಾರ ರಾತ್ರಿ ತನ್ನ ನೆರೆಮನೆ ನಿವಾಸಿಯಾದ ಸರೋಜ್ (30) ಮನೆ ಕದ ತಟ್ಟಿದ್ದಾನೆ. ತನ್ನೆರಡು ಮಕ್ಕಳೊಂದಿಗೆ ಮಲಗಿದ್ದ ಮಹಿಳೆ ಎದ್ದು ಬಂದು ಕದ ತೆಗೆದಾಗ ಕುಡಿಯಲು ನೀರು ಕೇಳಿದ್ದಾನೆ. ಹೊರಗಡೆ ಇರುವ ನಲ್ಲಿಯಿಂದ ನೀರು ಕುಡಿ ಎಂದು ಹೇಳಿದ ಆಕೆಗೆ ಸನ್ನಿ ಮನಬಂದಂತೆ ದೂಷಿಸಿದ್ದಾನೆ. ಸ್ವಲ್ಪ ಇರು ನೀರು ತರುತ್ತೇನೆಂದು ಆಕೆ ಒಳಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ ಆತ ಚಾಕುವಿನಿಂದ ಆಕೆಯ ಎದೆಗೆ ಚುಚ್ಚಿ, ಮತ್ತೊಮ್ಮೆ ನೀ ನನ್ನ ಎದುರಾದಾಗ ಕೊಲೆ ಮಾಡುತ್ತೇನೆ, ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.

ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೊದಲು ಸರೋಜ್ ಕುಟುಂಬದೊಂದಿಗೆ ಅನ್ಯೋನ್ಯವಾಗಿದ್ದ ಸನ್ನಿ ಇತ್ತೀಚೆಗೆ ಅವರ ಜತೆ ವೈಷಮ್ಯ ಬೆಳೆಸಿಕೊಂಡಿದ್ದ. ದಾಳಿ ಮಾಡಿದ ಸಂದರ್ಭದಲ್ಲಾತ ಕುಡಿದ ಮತ್ತಿನಲ್ಲಿದ್ದ ಎಂದು, ತನಿಖಾಧಿಕಾರಿ ಬಲ್ಕರ್ ಸಿಂಗ್ ಹೇಳಿದ್ದಾರೆ.

Comments are closed.