ರಾಷ್ಟ್ರೀಯ

ಕೈಕೊಟ್ಟ ಪ್ರಿಯಕರ: ನೋಯ್ಡಾ ಮಾಲ್‌ನಿಂದ ಜಿಗಿದು ಯುವತಿ ಆತ್ಮಹತ್ಯೆ

Pinterest LinkedIn Tumblr


ನೋಯ್ಡಾ : ಇಲ್ಲಿನ ಸೆಕ್ಟರ್‌ 39-ಎ ಯಲ್ಲಿರುವ ಗ್ರೇಟ್‌ ಇಂಡಿಯಾ ಪ್ಲೇಸ್‌ ಎಂಬ ಮಾಲ್‌ನ ಮೇಲಂತಸ್ತಿನಿಂದ ಜಿಗಿದು ಉತ್ತರ ಪ್ರದೇಶದ ಬರೋಲಾ ಗ್ರಾಮದ ಹುಡುಗಿ ಶಿವಾಂಗಿ ಎಂಬಾಕೆ ಇಂದು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕಿರುವ ಆಕೆಯ ಡೆತ್‌ ನೋಟ್‌ ಪ್ರಕಾರ “ನಾನು ಮದುವೆಯಾಗಲು ಬಯಸಿರುವ ಹುಡುಗ ಕಳೆದ ಎರಡು ದಿನಗಳಿಂದ ನನ್ನ ಬಳಿ ಮಾತನಾಡುತ್ತಿಲ್ಲ; ಆತನೊಂದಿಗಿನ ನನ್ನ ಸಂಬಂಧದ ಗತಿ ಏನಾಗುವುದೆಂಬ ಬಗ್ಗೆ ನನಗೆ ಕಳವಳವಿದೆ’ ಎಂದು ಆಕೆ ಬರೆದಿರುವುದಾಗಿ ತಿಳಿದುಬಂದಿದೆ.

ಪೊಲೀಸರು ಶಿವಾಂಗಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.