ರಾಷ್ಟ್ರೀಯ

ರೈಲು ಪ್ರಯಾಣಿಕರೊಬ್ಬರ ಟ್ವೀಟ್…ಕೇವಲ ಅರ್ಧ ಗಂಟೆಯಲ್ಲಿ 26 ಅಪ್ರಾಪ್ತ ಬಾಲಕಿಯರ ರಕ್ಷಿಸಿದ ಪೊಲೀಸರು

Pinterest LinkedIn Tumblr

ನವದೆಹಲಿ: ಕೇವಲ ಒಂದು ಟ್ವೀಟ್ ಅರ್ಧ ಗಂಟೆಯಲ್ಲಿ 26 ಅಪ್ರಾಪ್ತ ಬಾಲಕಿಯರ ರಕ್ಷಣೆಗೆ ಕಾರಣವಾಗಿದೆ.

ಹೌದು, ಮುಜಾಫರ್ ಪುರ-ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನಲ್ಲಿ 26 ಅಪ್ರಾಪ್ತ ಬಾಲಕಿಯರನ್ನು ಇಬ್ಬರು ವ್ಯಕ್ತಿಗಳು ಕರೆದೊಯ್ಯುತ್ತಿದ್ದರು. ಮಕ್ಕಳು ಅಳುತ್ತಿದ್ದುದ್ದನ್ನು ಗಮನಿಸಿ ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನೋಡಿದ ರೈಲ್ವೆ ಅಧಿಕಾರಿಗಳು, ಆ್ಯಂಟಿ ಟ್ರಾಫಿಕಿಂಗ್ ಯುನಿಟ್ ಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಟ್ರೈನ್ ಕ್ಯಾಚ್ ಮಾಡಿದ ಇಬ್ಬರು ಪೊಲೀಸರು ಕಪತ್ ಗಂಜ್ ನಿಂದ ಗೋರಖ್ ಪುರವರೆಗೆ ಭದ್ರತೆ ಒದಗಿಸಿದ್ದರು. ನಂತರ ಜಿಆರ್ಪಿ ಮತ್ತು ಆರ್ಪಿಎಫ್ ಪೊಲೀಸರು ಬಾಲಕರಿಯರನ್ನು ರಕ್ಷಣೆ ಮಾಡಿದ್ದಾರೆ.

ಇನ್ನು ಬಾಲಕಿಯರನ್ನು ಕರೆದೊಯ್ಯುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲಾ ಬಿಹಾರದ ಚಂಪಾರಣಕ್ಕೆ ಸೇರಿದವರಾಗಿದ್ದು ಅವರನ್ನು ನರಕ್ತಿಯಾಗಂಜ್ ನಿಂದ ಇದ್ಗಾಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ.

Comments are closed.