ರಾಷ್ಟ್ರೀಯ

ಮಿಷನರೀಸ್‌ ಆಫ್‌ ಚಾರಿಟಿ ಸಿಸ್ಟರ್‌ ನಿಂದ ಮಕ್ಕಳ ಮಾರಾಟ!

Pinterest LinkedIn Tumblr


ರಾಂಚಿ: ಮಿಷನರೀಸ್‌ ಆಫ್‌ ಚಾರಿಟಿಯ ನಿರ್ಮಲ್‌ ಹೃದಯ ಸಂ ಸ್ಥೆಯ ಸಿಸ್ಟರ್‌ ಯುವತಿಗೆ ಅಕ್ರಮವಾಗಿ ಮಗುವನ್ನು ಮಾರಾಟ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ವಿಶೇಷಚೇತನರು ಹಾಗೂ ಅಬಲೆಯರಿಗೆ ಆಶ್ರಯ ನೀಡುವ ನಿರ್ಮಲ್‌ ಹೃದಯ ಸಂಸ್ಥೆಯ ಸಿಬ್ಬಂದಿ (ಸಿಸ್ಟರ್‌) ಕೊನ್ಸಿಲಿಯಾ, ಮದುವೆಯಾಗದ ಯುವತಿಯ ಮಗುವನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಈ ಸಂಬಂಧ ಕೊನ್ಸಿಲಿಯಾ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಇದೇ ಮಾದರಿಯಲ್ಲಿ ಮೂರು ಮಕ್ಕಳನ್ನು ಕೊನ್ಸಿಲಿಯಾ ಮಾರಾಟ ಮಾಡಿದ್ದಾಳೆ ಎಂಬ ಮಾಹಿತಿ ಇದ್ದು, ಮಗು ಪಡೆದವರ ಬಗ್ಗೆ ವಿವರ, ವಿಳಾಸಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ರಾಂಚಿ ಎಸ್‌ಎಸ್‌ಪಿ ಅನಿಶ್‌ ಗುಪ್ತ ತಿಳಿಸಿದ್ದಾರೆ.

ಪ್ರಸ್ತುತ ಸಂಸ್ಥೆಯಲ್ಲಿ 11 ಗರ್ಭಿಣಿ ಯುವತಿಯರು, 75 ವಿಶೇಷಚೇತನರಿಗೆ ಆಶ್ರಯ ನೀಡಿದೆ. ಮದುವೆಯಾಗದೇ ತಾಯಿಯಾದವರಿಗೆ ಕೊನ್ಸಲಿಯಾ ಮುಖ್ಯಸ್ಥೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ತನುಶ್ರೀ ಸರ್ಕರ್‌ ಈ ಕುರಿತು, 11 ಗರ್ಭಿಣಿಯರನ್ನು ಕರುಣ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ. ನಿರ್ಮಲ್‌ ಹೃದಯ್‌ ಸಂಸ್ಥೆಯ ಈ ವಿಭಾಗವನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ವಿಭಾಗಗಳು ಇಲಾಖೆಯಡಿ ಬಾರದೇ ಇರುವ ಕಾರಣ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಇದಲ್ಲದೆ 70 ಮಕ್ಕಳನ್ನು ಶುಕ್ರವಾರ ನಿರ್ಮಲ್‌ ಶಿಶು ಭವನಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇಂತಹ ಘಟನೆ ಬಳಿಕ ಅನಾಥ ಮಕ್ಕಳನ್ನು ಮಿಷನರೀಸ್‌ ಆಫ್‌ ಚಾರಿಟಿ ಸಂಸ್ಥೆಗೆ ಕಳುಹಿಸಲಾಗುವುದಿಲ್ಲ. 11 ಗರ್ಭಿಣಿ ಯುವತಿಯರನ್ನು ಸಮಿತಿ ಮುಂದೆ ಹಾಜರುಪಡಿಸಬೇಕಿತ್ತು. ಈವರೆಗೆ ಸಂಸ್ಥೆ ಈ ನಿಯಮವನ್ನು ಅನುಸರಿಸಿಲ್ಲ.

Comments are closed.