ರಾಷ್ಟ್ರೀಯ

ತಮಿಳುನಾಡಿನ ತಿರುಪ್ಪೂರಿನಲ್ಲಿ ಪ್ಲಾಸ್ಟಿಕ್ ಬಳಕೆಯಿಲ್ಲದ ಪರಿಸರ ಸ್ನೇಹಿ ಮದುವೆ!

Pinterest LinkedIn Tumblr


ತಿರುಪ್ಪೂರು: ಮದುವೆಗೆ ಖರ್ಚು ಮಾಡುವವರು ಇಲ್ಲೊಮ್ಮೆ ಗಮನಿಸಿ…

ತಮಿಳುನಾಡಿನ ತಿರುಪ್ಪೂರಿನಲ್ಲಿ ನಡೆದ ಮದುವೆಯೊಂದರಲ್ಲಿ ಪ್ಲಾಸ್ಟಿಕ್‌ ಅನ್ನು ಬಳಕೆಯೇ ಮಾಡಿಲ್ಲ.

ಟೆಕ್ಸ್‌ಟೈಲ್‌ ಉದ್ಯಮಿಯಾಗಿರುವ ಲೋಕೇಶ್ವರನ್‌ ಹಾಗೂ ಗೀತಾಂಜಲಿ ರಿತಿಕಾ ದಂಪತಿ ಇಂತಹ ಪರಿಸರ ಸ್ನೇಹಿ ಮದುವೆ ಕಾರ್ಯಕ್ರಮ ಮಾಡಿದವರು.

ನೈಸರ್ಗಿಕ ಉತ್ಪನ್ನಗಳು

ನೈಸರ್ಗಿಕ ವಸ್ತುಗಳಿಂದ ಮಾಡಿರುವ ವಸ್ತುಗಳನ್ನಷ್ಟೇ ಮದುವೆಯಲ್ಲಿ ಬಳಸಲಾಗಿದ್ದು, ಶೇ.100ರಷ್ಟು ಪರಿಸರ ಸ್ನೇಹಿಯಾಗಿ ಮದುವೆ ಮಾಡಿದ್ದಾರೆ. ಅಷ್ಟು ಮಾತ್ರ ಅಲ್ಲ, ಮದುವೆಯ ಔತಣಕ್ಕೂ ಸಾವಯವ ಕೃಷಿಯ ಮೂಲಕ ತಮ್ಮದೇ ತೋಟದಲ್ಲಿ ಬೆಳೆದ ತರಕಾರಿಗಳನ್ನು ಬಳಸಿದ್ದಾರೆ.
ತರಕಾರಿ ಬೆಳೆಗೆ ಮಳೆ ನೀರನ್ನು ಮಳೆಕೊಯ್ಲು ಬಳಸಿ, ಇದೇ ನೀರನ್ನು ಮದುವೆಗೆ ಬಂದ ಅತಿಥಿಗಳಿಗೂ ನೀಡಿ ಹೊಸತನ ಆರಂಭಿಸಿದ್ದಾರೆ.

ಮಣ್ಣಿನ ಉತ್ಪನ್ನಗಳ ಬಳಕೆ

ನಿಶ್ಚಿತಾರ್ಥದ ಬಳಿಕ ಎರಡೂ ಕುಟುಂಬ ಪರಿಸರ ಸ್ನೇಹಿ ಮದುವೆ ಕಾರ್ಯಕ್ರಮಕ್ಕೆ ಅಣಿಯಾಗಿದ್ದಾರೆ. ಮದುವೆ ಬರುವ ಮಕ್ಕಳಿಗೆ ನೈಸರ್ಗಿಕ ವಸ್ತುಗಳಿಂದ ಮಾಡಿರುವ ಆಟಿಕೆಗಳನ್ನೂ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿ ಪಡಿಸಿದ್ದಾರೆ.

ತಮಿಳುನಾಡಿನ ಆಚರಣೆಯಂತೆ ಗೀತಾಂಜಲಿ ಕುಟುಂಬ ವರನಿಗೆ ಕಂಗಾಯಮ್‌ ತಳಿಯ ಹಸುವನ್ನೂ ನೀಡಿದ್ದಾರೆ. ಸಂಪೂರ್ಣ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ ನಿಂದ ಬಳಸಿದ ಯಾವುದೇ ವಸ್ತುವನ್ನು ಬಳಸದೇ, ಎರಡೂ ಕುಟುಂಬ ಹೊಸ ಆಲೋಚನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.

Comments are closed.