ರಾಷ್ಟ್ರೀಯ

ಕೇರಳ ರಾಜ್ಯಪಾಲರಿಂದ ವೇಗ ಮಿತಿ ಉಲ್ಲಂಘನೆ: ದಂಡ ಪಾವತಿ

Pinterest LinkedIn Tumblr


ತಿರುವನಂತಪುರ : ತಮ್ಮ ಅಧಿಕೃತ ವಾಹನ ವೇಗ ಮಿತಿಯ ನಿಯಮ ಉಲ್ಲಂಘನೆ ಗೈದ ಕಾರಣಕ್ಕೆ ತಮಗೆ ವಿಧಿಸಲಾದ 400 ರೂ. ದಂಡದ ಮೊತ್ತವನ್ನು ಕೇರಳ ರಾಜ್ಯಪಾಲ ಪಿ ಸದಾಶಿವಂ ಪಾವತಿಸಿದ್ದಾರೆ.

ಕಳೆದ ಎಪ್ರಿಲ್‌ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದರು. ದಂಡ ಪಾವತಿಸುವ ಮೂಲಕ ಅವರು ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡುವ ಹೈಪ್ರೊಫೈಲ್‌ ವ್ಯಕ್ತಿಗಳಿಗೆ ನಿಯಮ ಪಾಲನೆಗಾಗಿ ಮಾರ್ಗದರ್ಶಿಯಾದರು.

ಮಾಜಿ ವರಿಷ್ಠ ನ್ಯಾಯಮೂರ್ತಿಯಾಗಿರುವ ಸದಾಶಿವಂ ಅವರು ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ ತಮ್ಮ ಅಧಿಕೃತ ಕಾರಿನಲ್ಲಿ ತಾವು ಖುದ್ದು ಪ್ರಯಾಣಿಸಿರಲಿಲ್ಲ. ಹಾಗಿದ್ದರೂ ದಂಡ ಪಾವತಿಯ ಆದೇಶವನ್ನು ಪಾಲಿಸಿ ಇತರರಿಗೆ ಮಾರ್ಗದರ್ಶಿಯಾದರು ಎಂದು ರಾಜ ಭವನದ ಅಧಿಕಾರಿ ಹೇಳಿದರು.

Comments are closed.