ಕರ್ನಾಟಕ

ಇದು ಹಾಸನ, ರಾಮನಗರ, ಮಂಡ್ಯದ ಬಜೆಟ್‌ : ಬಿಜೆಪಿಯಿಂದ ಪ್ರತಿಭಟನೆ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ ಮಂಡನೆ ಮುಗಿಸುತ್ತಿದ್ದಂತೆ ಬಿಜೆಪಿ ಶಾಸಕರು ಧಿಕ್ಕಾರ ಕೂಗಿದ್ದಾರೆ. ಇದು ಹಾಸನ, ಮಂಡ್ಯ ಮತ್ತು ರಾಮನಗರದ ಬಜೆಟ್‌ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಯಾವುದೇ ಯೋಜನೆ, ಯಾವುದೇ ಅನುದಾನವನ್ನು ಘೋಷಿಸಿಲ್ಲ ಎಂದು ಧಿಕ್ಕಾರ ಬರೆ ಭಿತ್ತಿ ಪತ್ರಗಳನ್ನು ಕರಾವಳಿ ಭಾಗದ 16 ಮಂದಿ ಶಾಸಕರು ಘೋಷಣೆಗಳನ್ನು ಕೂಗಿದರು.

ಕರಾವಳಿಯಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದ್ದು ಪರಿಹಾರ ನೀಡಿಲ್ಲ. ಎಂಡೋ ಸಂತ್ರಸ್ತ್ರರಿಗೆ , ಮೀನುಗಾರಿರಿಗೆ ಯಾವುದೇ ಯೋಜನೆ ನೀಡಿಲ್ಲ ಎಂದು ವ್ಯಾಪಕ ಆಕ್ರೋಶ ಹೊರ ಹಾಕಿದರು.

ಜಗದೀಶ್‌ ಶೆಟ್ಟರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಇದು ಕೆಲವೇ ಜಿಲ್ಲೆಗೆ ಸೀಮಿತವಾದ ಬಜೆಟ್‌, ಹೇಳಿದ ಮಾತಿನಂತೆ ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ ಎಂದರು.

ಆರ್‌ .ಅಶೋಕ್‌ ಅವರು ಮಾತನಾಡಿ ಇದು ಹಾಸನಕ್ಕೆ ಮಾತ್ರ ಸೀಮಿತವಾದ ಬಜೆಟ್‌ , ಬೆಂಗಳೂರು , ಕರಾವಳಿ, ಹೈದರಾಬಾದ್‌ ಕರ್ನಾಟಕ್ಕೆ ಯಾವುದೇ ಯೋಜನೆಗಳಿಲ್ಲ ಎಂದರು.

Comments are closed.