ರಾಷ್ಟ್ರೀಯ

ಸರಕಾರಿ ಶಾಲೆಗೆ ಸೇರಿದರೆ ಚಿನ್ನದ ನಾಣ್ಯ, 5000 ರೂ., ಸಮವಸ್ತ್ರ

Pinterest LinkedIn Tumblr


ಕೊಯಂಬತ್ತೂರು: ತಮಿಳುನಾಡಿನಲ್ಲಿ ಸರಕಾರಿ ಶಾಲೆಗೆ ಸೇರುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಒಂದು ಗ್ರಾಂ ಚಿನ್ನದ ನಾಣ್ಯ, ಐದು ಸಾವಿರ ರೂ. ಜತೆಗೆ ಎರಡು ಜತೆ ಸಮವಸ್ತ್ರ ನೀಡಲಾಗುತ್ತಿದೆ.

ಅತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಲು ತಮಿಳುನಾಡು ಸರಕಾರ ಚಿಂತನೆ ನಡೆಸಿದೆ. ಹೀಗಾಗಿ ಶಿಕ್ಷಕರು ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆತರಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ವಲ್ಪರೈನಲ್ಲಿರುವ ಮುದಿಸ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿನೇಳು ವಿದ್ಯಾರ್ಥಿಗಳಿದ್ದ ಕಾರಣ ಕಳೆದ ವಾರ ಆ ಶಾಲೆಯನ್ನು ಮುಚ್ಚಲಾಗಿದೆ. ಅಲ್ಲಿದ್ದ ಹತ್ತು ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ನಿಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳ ಶಿಕ್ಷಕರು ಆ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ.

ಆರು ವಿದ್ಯಾರ್ಥಿಗಳಿರುವ ಕೊನ್ನಾರ್‌ಪಾಳ್ಯಂ ಶಾಲೆಯ ಶಿಕ್ಷಕರು ತಮ್ಮ ಶಾಲೆಗೆ ಬರುವಂತೆ ಉತ್ತೇಜಿಸಲು ಹತ್ತು ಮಕ್ಕಳಿಗೆ ಒಂದು ಗ್ರಾಂ ಚಿನ್ನದ ನಾಣ್ಯ, ಐದು ಸಾವಿರ ರೂ. ಜತೆಗೆ ಎರಡು ಜತೆ ಸಮವಸ್ತ್ರ ನೀಡಲು ಮುಂದಾಗಿದ್ದಾರೆ.

ಕೊನೆರ್‌ಪಲ್ಲಿ ಸರಕಾರಿ ಶಾಲೆಯಲ್ಲಿ ಆರು ವಿದ್ಯಾರ್ಥಿಗಳಿದ್ದರು. ಇಬ್ಬರು ವಿದ್ಯಾರ್ಥಿಗಳು ಐದನೇ ತರಗತಿ ಉತ್ತೀರ್ಣರಾಗಿದ್ದು, ನಾಲ್ವರು ವಿದ್ಯಾರ್ಥಿಗಳಷ್ಟೆ ಈಗ ಇದ್ದಾರೆ. ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾರಣ ಅದನ್ನು ಮುಚ್ಚುವ ಭೀತಿ ಎದುರಾಗಿದೆ. ಹೀಗಾಗಿ ಇಲ್ಲೂ ಇಂಥ ಸ್ಕೀಮ್‌ ಪ್ರಕಟಿಸಲಾಗಿದೆ.

Comments are closed.