ರಾಷ್ಟ್ರೀಯ

ಬುರಾರಿ 11 ಮಂದಿ ಸಾಮೂಹಿಕ ಆತ್ಮಹತ್ಯೆ; ಆತ್ಮಗಳು ಹೊರಹೋಗಲು 11 ಪೈಪ್ ! ಮತ್ತಷ್ಟು ನಿಗೂಢವಾಗುತ್ತಿರುವ ಪ್ರಕರಣ

Pinterest LinkedIn Tumblr

ನವದೆಹಲಿ: ಕಳೆದ ವಾರ ಬುರಾರಿಯಲ್ಲಿ ನಡೆದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಮತ್ತಷ್ಟು ನಿಗೂಢವಾಗುತ್ತಿದೆ.

ದುರಂತ ಅಂತ್ಯ ಕಂಡ ಭಾಟಿಯಾ ಕುಟಂಬ ವಾಸಿಸುತ್ತಿದ್ದ ಮನೆ ಗೋಡೆಯಲ್ಲಿ 11 ಪೈಪ್ ಗಳು ಕಂಡುಬಂದಿದ್ದು 11 ಮಂದಿ ಸಾವಿಗೂ 11 ಪೈಪ್ ಗೂ ಏನಾದರೂ ಸಾಮ್ಯತೆ ಇದೆಯೇ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ಮನೆ ಗೋಡೆಯಲ್ಲಿ ಕಂಡುಬಂದಿರುವ 11 ಪೈಪ್ ಗಿಳಗೂ 11 ಮಂದಿ ಸಾವಿಗೂ ಹೋಲಿಕೆ ಕಂಡುಬಂದಿದೆ. ಹೌದು ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದು 7 ಪೈಪ್ ಗಳು ಬಾಗಿದೆ. ಇನ್ನು ನಾಲ್ಕು ಪೈಪ್ ಗಳು ಬಾಗಿದ್ದು ಮೃತರಲ್ಲಿ ನಾಲ್ವರು ಪುರುಷರಾಗಿದ್ದಾರೆ.

ಇನ್ನ ಆತ್ಮಗಳು ಮುಕ್ತವಾಗಿ ಹೊರಹೋಗಲು ಈ ಪೈಪ್ ಗಳನ್ನು ಅಳವಡಿಸಿರಬಹುದು ಎಂದು ಸ್ಥಳೀಯ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಪೈಪ್ ಗಳು ಹಾಗೂ ಸಾಮೂಹಿಕ ಸಾವಿನ ನಡುವಿರುವ ಸಂಬಂಧವೇನು? ಎಂಬ ಪ್ರಶ್ನೆ ಈಗ ತನಿಖಾಧಿಕಾರಿಗಳಿಗಷ್ಟೇ ಅಲ್ಲ ಜನಸಾಮಾನ್ಯರನ್ನು ಕಾಡುತ್ತಿದೆ.

Comments are closed.