ರಾಷ್ಟ್ರೀಯ

ವಾರವಿಡಿ ದೇಶದ ಹಲವೆಡೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Pinterest LinkedIn Tumblr


ಹೊಸದಿಲ್ಲಿ: ಈ ವಾರಾಂತ್ಯದಲ್ಲಿ ದೇಶದ ಹಲವಾರು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಮ್ಮು ಕಾಶ್ಮೀರ, ತಮಿಳುನಾಡು, ಅಸ್ಸಾಂ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ ಮತ್ತು ಮೇಘಾಲಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ದೇಶದ ಬಹುತೇಕ ಎಲ್ಲ ರಾಜ್ಯಗಳಿಗೂ ಮುಂಗಾರು ಪ್ರವೇಶ ಮಾಡಿದೆ. ನಿಗದಿತ ಅವಧಿಗಿಂತ 17 ದಿನ ಮುನ್ನವೇ ಮುಂಗಾರು ಮಳೆ ಆರಂಭವಾಗಿದೆ.

ಉತ್ತರಾಖಂಡದಲ್ಲಿ ಈಗಾಗಲೇ ಭಾರಿ ಮಳೆಯಾಗಿರುವ ವರದಿಗಳು ಬಂದಿವೆ.

ಕರ್ನಾಟಕದ ಕರಾವಳಿ, ತಮಿಳುನಾಡು, ಕೇರಳದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ.

ಉಳಿದಂತೆ ಚಂಡೀಗಢ, ಛತ್ತೀಸ್‌ಗಢ, ಒಡಿಶಾ, ನಾಗಾಲ್ಯಾಂಡ್‌, ಮಣಿಪುರ, ತ್ರಿಪುರಾ, ಕೊಂಕಣ್‌, ಗೋವಾ, ರಾಯಲಸೀಮ, ಲಕ್ಷದ್ವೀಪದಲ್ಲಿಯೂ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರದಿಂದ ಮಳೆಯಾಗುವ ನಿರೀಕ್ಷೆ ಇದೆ. ಗುರುವಾರ ಬಹುತೇಕ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನಾಲ್ಕು ತಿಂಗಳ ಕಾಲ ಮುಂಗಾರು ಮಳೆಯಾಗುವ ವಾಡಿಕೆ ಇದೆ. ಜೂನ್‌ 1 ರಿಂದ ಸೆಪ್ಟೆಂಬರ್‌ 30ರವರೆಗೆ ಮುಂಗಾರು ಮಳೆಯಾಗಲಿದೆ. ಆದರೆ ಈ ಬಾರಿ ನಿಗದಿತ ಅವಧಿಗೆ ಮುನ್ನವೇ ಮುಂಗಾರ ಪ್ರವೇಶವಾಗಿದೆ. ಈ ವರ್ಷ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

Comments are closed.