ರಾಷ್ಟ್ರೀಯ

ಉತ್ತರಾಖಂಡ್’ನ ಪೌರಿ ಗರ್ಹ್ವಾಲ್’ನಲ್ಲಿ ಕಂದಕಕ್ಕೆ ಉರುಳಿಬಿದ್ದ ಬಸ್; 44 ಮಂದಿ ದುರ್ಮರಣ

Pinterest LinkedIn Tumblr

ಉತ್ತರಾಖಂಡ್: ಉತ್ತರಾಖಂಡ್’ನ ಪೌರಿ ಗರ್ಹ್ವಾಲ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 44 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.

ಪೌರಿ ಗರ್ಹ್ವಾಲ್ ಜಿಲ್ಲೆಯ ನೈನಿದಂದ ಬ್ಲಾಕ್ ಬಳಿಯಿರುವ ಪಿಪಾಲಿ-ಭೂವಾನ್ ಮೊಟಾರ್’ವೇ ನಲ್ಲಿ ದುರ್ಘಟನೆ ಸಂಭವಿಸಿದೆ.

ಭೂವಾನ್ ನಿಂದ ರಾಮನಗರಕ್ಕೆ 45 ಮಂದಿ ಪ್ರಯಾಣಿಕರನ್ನು ಮಿನಿ ಬಸ್ ವೊಂದು ಹೊತ್ತೊಯ್ಯುತ್ತಿತ್ತು. ನೈನಿದಂದ ಬ್ಲಾಕ್ ಬಳಿ ಬರುತ್ತಿದ್ದಂತೆಯೇ ಬಸ್ 600 ಅಡಿ ಆಳವಿರುವ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ 44 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಎನ್’ಡಿಆರ್’ಎಫ್ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಘಟನೆಗೆ ಈ ವರೆಗೂ ಕಾರಣಗಳು ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments are closed.