ರಾಷ್ಟ್ರೀಯ

ಗದ್ದೆಯಲ್ಲಿ ರೈತನಿಂದ ನಟಿ ಕಾಜಲ್ ಅಗರವಾಲ್ ಕಟೌಟ್!

Pinterest LinkedIn Tumblr


ತಾವು ಬೆಳೆದ ಬೆಳೆಗಳಿಗೆ ಯಾವುದೇ ದೃಷ್ಟಿ ತಾಕದಂತಿರಲು ರೈತರು ವಿಭಿನ್ನವಾಗಿ ಆಲೋಚಸುತ್ತಿದ್ದಾರೆ ಎಂಬುದಕ್ಕೆ ನಿದರ್ಶನ ಇದು. ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆನ್ನಾ ರೆಡ್ಡಿ ಎಂಬ ರೈತ ತನ್ನ ಹೊಲಕ್ಕೆ ದಾರಿಹೋಕರ ದೃಷ್ಟಿ ತಾಕದಂತಿರಲಿ ಎಂಬ ಉದ್ದೇಶದಿಂದ ದೃಷ್ಟಿಗೊಂಬೆಯಂತೆ ಸನ್ನಿ ಲಿಯೋನ್‌ರ ಅರೆನಗ್ನ ಕಟೌಟ್ ಹಾಕಿದ್ದರು.

ಇದೀಗ ಇದೇ ಹಾದಿಯಲ್ಲಿ ತೆಲಂಗಾಣ ಮೂಲದ ಮತ್ತೊಬ್ಬ ರೈತ ಸಹ ಪ್ರಯತ್ನಿಸಿದ್ದಾರೆ. ಆದರೆ ಹೊಲದಲ್ಲಿ ಸನ್ನಿಗೆ ಬದಲಾಗಿ ಕಾಜಲ್ ಅಗರವಾಲ್ ಪೋಸ್ಟರ್ ಹಾಕಿದ್ದಾರೆ. ಆಂಧ್ರದಲ್ಲಿ ಸನ್ನಿ ಲಿಯೋನ್ ದರ್ಶನ ನೀಡಿದರೆ ತೆಲಂಗಾಣದಲ್ಲಿ ಕಾಜಲ್ ಅಗರವಾಲ್‌ರನ್ನು ದಾರಿಹೋಕರು ಕಣ್ತುಂಬಿಕೊಳ್ಳುವಂತಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಪಂಚಾಯಿತಿಯ ಗೊಲ್ಲಪಲ್ಲಿ ರೈತ ಅನ್ವರ್‌ಗೆ (30) ಎರಡು ಎಕರೆ ಕೃಷ್ಟಿ ಭೂಮಿ ಇದೆ. ಈ ಹೊಲದಲ್ಲಿ ತರಕಾರಿ ಬೆಳೆಯುತ್ತಾರೆ. ಹೆದ್ದಾರಿ ಪಕ್ಕದಲ್ಲೇ ಅವರ ಜಮೀನು ಇರುವ ಕಾರಣ ದಾರಿಹೋಕರು ಅದೇ ಕೆಲಸವಾಗಿ ನೋಡುತ್ತಿರುತ್ತಾರೆ. ಇದರಿಂದ ಬೆಳೆಗೆ ದೃಷ್ಟಿ ತಾಕುತ್ತದೆ ಎಂಬ ಉದ್ದೇಶದಿಂದ ತನಗೆ ಇಷ್ಟವಾದ ಕಾಜಲ್ ಅಗರವಾಲ್ ಕಟೌಟ್ ನಿಲ್ಲಿಸಿದ್ದಾರೆ.

“ಎರಡು ಕಾಜಲ್ ಕಟೌಟ್‌ಗಳನ್ನು ಕೆಲವು ದಿನಗಳ ಹಿಂದಷ್ಟೆ ಹೊಲದಲ್ಲಿಟ್ಟಿದ್ದೆ. ಈಗ, ನನಗೆ ವ್ಯತ್ಯಾಸ ಗೊತ್ತಾಗುತ್ತಿದೆ. ಈ ಹಿಂದೆ ಬೆಳೆ ಒಣಗುತ್ತಿತ್ತು. ಕೂಲಿ ಆಳುಗಳನ್ನಿಟ್ಟು ತುಂಬಾ ಖರ್ಚು ಮಾಡಿ ಕೃಷಿ ಮಾಡುತ್ತಿದ್ದೆ. ಆದರೆ ನಷ್ಟ ತಪ್ಪಿಸಕ್ಕೆ ಆಗುತ್ತಿರಲಿಲ್ಲ. ಈಗ ಬೆಳೆ ಚೆನ್ನಾಗಿ ಆಗುತ್ತಿದೆ. ಇದಕ್ಕೆ ಕಾರಣ ಕಾಜಲ್ ಅಗರವಾಲ್” ಎಂದಿದ್ದಾರೆ ಅನ್ವರ್.

ಹೊಲದಲ್ಲಿ ಕಾಜಲ್ ಅಗರವಾಲ್ ಕಟೌಟ್
ತಮ್ಮ ಹೊಲ ಹೆದ್ದಾರಿ ಪಕ್ಕದಲ್ಲೇ ಇದೆ. ದಾರಿಯಲ್ಲಿ ಹೋಗುವ ಪ್ರತಿಯೊಬ್ಬರೂ ಅದೇ ಕೆಲಸವಾಗಿ ಬೆಳೆಯನ್ನು ನೋಡಿಕೊಂಡು ಹೋಗುತ್ತಾರೆ. ಅವರ ದೃಷ್ಟಿ ಬಿದ್ದ ಕಾರಣಕ್ಕೆ ಬೆಳೆ ನಾಶವಾಗಿ ನಷ್ಟವಾಗುತ್ತಿತ್ತು. ಹಾಗಾಗಿ ಕಾಜಲ್ ಕಟೌಟ್ ಇಟ್ಟೆ. ಇನ್ನು ಮುಂದಾದರೂ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಅನ್ವರ್ ಹೊಸ ಬೆಳೆ ಬೆಳೆಯಲಿದ್ದಾರಂತೆ.

“ಈಗ ಎಲ್ಲರೂ ಬೆಳೆ ನೋಡದೆ ಅವರ ದೃಷ್ಟಿಯಲ್ಲಾ ಕಾಜಲ್ ಮೇಲೆ ಬೀಳುತ್ತಿದೆ” ಎಂದು ಫುಲ್ ಖುಷಿಯಿಂದ ಹೇಳಿದ್ದಾರೆ ಅನ್ವರ್. ಈ ವಿಚಾರದಲ್ಲಿ ತನ್ನ ಮೇಲೆ ಜೋಕ್ ಮಾಡುವವರು ಸಹ ಬೆಳೆ ನೋಡದೆ ಕಾಜಲ್ ಅಗರವಾಲ್‌ರನ್ನು ನೋಡುತ್ತಿದ್ದಾರೆ ಎಂದಿದ್ದಾರೆ ಅನ್ವರ್. “ವಾಸ್ತವಾಗಿ ಇದು ತನ್ನ ಐಡಿಯಾ ಅಲ್ಲ ತಮ್ಮ ತಂದೆ ಐಡಿಯಾ. ನಾನು ಕಾಜಲ್‌ರ ಅತಿ ದೊಡ್ಡ ಅಭಿಮಾನಿ ಎಂದು ಅವರಿಗೆ ಗೊತ್ತು. ಹಾಗಾಗಿ ಕಾಜಲ್ ಫೋಟೋ ಹೊಲದಲ್ಲಿ ಹಾಕು ಎಂದು ಅವರೇ ನನಗೆ ಹೇಳಿದ್ದು” ಎಂದು ಕಾಜಲ್ ರಹಸ್ಯ ಬಿಚ್ಚಿಟ್ಟಿದ್ದಾರೆ ಅನ್ವರ್.

Comments are closed.