ರಾಷ್ಟ್ರೀಯ

ಪುತ್ರನ ನಿಶ್ಚಿತಾರ್ಥದಲ್ಲಿ ನೀತಾ ಅಂಬಾನಿಯಿಂದ ನೃತ್ಯ!

Pinterest LinkedIn Tumblr


ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಈಗ ಮದುವೆ ಹಬ್ಬ. ಹಿರಿಯ ಪುತ್ರ ಆಕಾಶ್ ಅಂಬಾನಿ ವಿವಾಹ ಡೈಮಂಡ್ ಕಿಂಗ್ ಎಂದೇ ಕರೆಸಿಕೊಂಡಿರುವ ರಸ್ಸೆಲ್ ಮೆಹ್ತಾ ಮಗಳು ಶ್ಲೋಕಾ ಮೆಹ್ತಾ ಜತೆಗೆ ನಡೆಯಲಿದೆ. ಇದೇ 30ರಂದು ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮೆಹಂದಿ ಸಂಭ್ರಮ ಅದ್ದೂರಿಯಾಗಿ ನಡೆಯಿತು.

ಆಕಾಶ್ ಮತ್ತು ಶ್ಲೋಕಾ ಮೆಹಂದಿ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ದಂಪತಿಗಳು ಸೇರಿದಂತೆ ಶಾರುಖ್ ಖಾನ್ ದಂಪತಿಗಳು, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್, ಕಿರಣ್ ರಾವ್, ರಣಬೀರ್ ಕಪೂರ್, ಆಲಿಯಾ ಭಟ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್‌ನಂತಹ ಬಾಲಿವುಡ್ ತಾರೆಗಳು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು.

ಇದೇ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಾಡಿರುವ ನೃತ್ಯ ಎಲ್ಲರನ್ನೂ ವಿಶೇಷವಾಗಿ ಆಕರ್ಷಿಸುತ್ತಿದೆ. 2013ರಲ್ಲಿ ಬಂದಂತಹ ಬಾಲಿವುಡ್ ಸಿನಿಮಾ ’ಕೈ ಪೋ ಚೇ’ಯಲ್ಲಿನ ’ಶುಭಾರಂಭ್’ ಹಾಡಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಗಮನಸೆಳೆದಿದ್ದಾರೆ.

ಸದ್ಯಕ್ಕೆ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಕೆಂಪುಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ನೀತಾ ಮಾಡಿರುವ ನೃತ್ಯ ಎಲ್ಲರನ್ನೂ ಆಕರ್ಷಿಸುತ್ತಿದೆ. ನೀತಾ ಅವರು ಈ ರೀತಿ ನೃತ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ಮುಕೇಶ್, ನೀತಾ ಪುತ್ರಿ ಇಷಾ ಅಂಬಾನಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೂ ಮೋಹಕ ತಾರೆ ಶ್ರೀದೇವಿ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ್ದರು.

Comments are closed.