ಕರ್ನಾಟಕ

ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ದೀಪ ಬೆಳಗಿ ಚಾಲನೆ ನೀಡಿದ ಅವರು, ನರೇಂದ್ರ ಮೋದಿ, ಅಮಿತ್ ಶಾ, ಬೇರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ರಾಜ್ಯ ಪ್ರವಾಸ ಮಾಡಿದರು. ಆದರೂ ನಾವು 104 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುತುಕೊಳ್ಳುವ ಪರಿಸ್ಥಿತಿ ಬಂದಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ನಾವು ನಲ್ವತ್ತು ಸ್ಥಾನಗಳಿಂದ 104 ಸ್ಥಾನ ತಲುಪಿದ್ದೇವೆ, ಕಾಂಗ್ರೆಸ್ 132 ರಿಂದ 75 ಕ್ಕೆ ಕುಸಿದಿದೆ, ಜೆಡಿಎಸ್ 38 ಕ್ಕೆ ಕುಸಿದಿದೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೇವಲ 1600 ಮತಗಳಿಂದ ಮಾತ್ರ ಗೆದ್ದಿದ್ದಾರೆ, ನಾವು 113 ಸ್ಥಾನ ಗೆಲ್ಲಲಿಕ್ಕಾಗಲಿಲ್ಲ ಎಂಬ ನೋವಿದೆ ಎಂದರು.

ಈ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಬಿಜೆಪಿ ಪರವಾಗಿ ನಿಂತರು. ಈ ದೇಶದಲ್ಲಿ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಸಿಂಗಲ್ ಲಾರ್ಜೆಸ್ಟ್‌ ಪಾರ್ಟಿಗೆ ಅವಕಾಶ ಕೊಡುವುದು ನಮಗೆಲ್ಲ ಗೊತ್ತು. ಸುಪ್ರೀಂಕೋರ್ಟ್ ನಲ್ಲಿ ಮಧ್ಯರಾತ್ರಿ ಈ ಕುರಿತು ಚರ್ಚೆ ಆಯಿತು. ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶ ಇದ್ದರೂ 24 ಗಂಟೆ ಅವಕಾಶ ಕೊಡುವ ರೀತಿ ಮಾಡಿದ್ದನ್ನು ನಾನು ಈವರೆಗೂ ಕಂಡಿರಲಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲಿಗೆ ಹೋದರೂ ಬಿಜೆಪಿಗೆ ಎಲ್ಲಿ ಹಿನ್ನಡೆ ಆಯಿತು ಎಂದು ಕೇಳುತ್ತಾರೆ. ರಾಜ್ಯದಲ್ಲಿ 25000 ಸಾವಿರದಷ್ಟು ನಕಲಿ ಮತಗಳನ್ನು ಕಾಂಗ್ರೆಸ್ ಮಾತ್ತು ಜೆಡಿಎಸ್ ಸೃಷ್ಟಿ ಮಾಡಿರುವುದು ನಿಮಗೆ ಗೊತ್ತು ಎಂದು ಯಡಿಯೂರಪ್ಪ ಹೇಳಿದರು.

ದೀನದಯಾಳ್ ಉಪಾಧ್ಯಾಯ, ಶ್ಯಾಮ್ ಪ್ರಸಾದ್ ಮುಖರ್ಜಿ, ಮತ್ತು ಭಾರತಮಾತೆ ಪೋಟೊಗಳಿಗೆ ಯಡಿಯೂರಪ್ಪ, ಅನಂತ್ ಕುಮಾರ್, ಆರ್. ಅಶೋಕ್, ಸಿ.ಟಿ ರವಿ, ಪ್ರಹ್ಲಾದ್ ಜೋಶಿ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಅವರು ಪುಷ್ಪಾರ್ಚನೆ ಮಾಡಿದವರು.

Comments are closed.