ರಾಷ್ಟ್ರೀಯ

ಗಂಡು ಮಗ ಆಗಿದ್ರೆ ಟ್ವೀಟ್‌ ಡಿಲೀಟ್‌ ಮಾಡ್ಬಾರ್ದು: ಬಿಜೆಪಿ ಮುಖಂಡನಿಂದ ಕೇಜ್ರಿವಾಲ್‌ಗೆ ಸವಾಲು

Pinterest LinkedIn Tumblr


ಹೊಸದಿಲ್ಲಿ: ಬಿಜೆಪಿ ಮುಖಂಡ ತಜೀಂದ್ರ ಪಾಲ್‌ ಸಿಂಗ್‌ ಬಗ್ಗಾ ಅವರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರಿಗೆ ಗಂಡಸ್ತನದ ಬಗ್ಗೆ ಸವಾಲು ಹಾಕಿದ್ದಾರೆ. ಗಂಡು ಮಗನೇ ಆಗಿದ್ದರೆ ಟ್ವೀಟ್‌ ಡಿಲೀಟ್‌ ಮಾಡಬಾರದು ಎಂದು ಬಹಿರಂಗವಾಗಿ ಆಪ್‌ ಮುಖಂಡ ಕೇಜ್ರಿವಾಲ್‌ ಅವರಿಗೆ ತಜೀಂದ್ರ ಪಾಲ್‌ ಸವಾಲು ಹಾಕಿದ್ದಾರೆ.

ಬುಧವಾರ ಆಪ್‌ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ‘ಸಮಾಜದಲ್ಲಿ ಬದಲಾವಣೆ ತರುವುದೇ ನಮ್ಮ ಗುರಿ. ಕೇವಲ ಗಲಾಟೆ ಮಾಡುವುದು ನಮ್ಮ ಉದ್ದೇಶವಲ್ಲ’ ಎಂದು ಪೋಸ್ಟ್‌ ಮಾಡಿತ್ತು. ಜತೆಗೆ 2011ರಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಎಂಬ ಸಾಲುಗಳಿರುವ ಚಿತ್ರವನ್ನು ಟ್ವೀಟ್‌ನಲ್ಲಿ ಬಳಸಿಕೊಂಡಿತ್ತು.

ಆಪ್‌ ಟ್ವೀಟ್‌ನ ಸ್ಕ್ರೀನ್‌ಶಾಟ್‌ ತೆಗೆದುಕೊಂಡಿರುವ ತಜೀಂದರ್‌ ಪಾಲ್‌ ಸಿಂಗ್‌, ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಗಾಂಧಿ ಕುಟುಂಬವನ್ನು ಬೆಂಬಲಿಸುವ ಬಗ್ಗೆ ಸತ್ಯವನ್ನೇ ಹೇಳಿದ್ದೀರಿ ಅರವಿಂದ ಕೇಜ್ರಿವಾಲ್‌ ಜೀ. ನೀವು ಗಂಡು ಮಗನೇ ಆಗಿದ್ದರೆ ಈ ಟ್ವೀಟ್‌ ಡಿಲೀಟ್‌ ಮಾಡಬಾರದು ಎಂದು ಟ್ವೀಟ್‌ ಮಾಡಿದ್ದಾರೆ.

2011ರಲ್ಲಿ ಭ್ರಷ್ಟಾಚಾರದ ವಿರುದ್ಧ, ಅಂದರೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಹೋರಾಟ ಮಾಡಿದ್ದವರು ಇಂದು ಅದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೀರಿ. 2018ರಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾಡುವ ಹೋರಾಟಕ್ಕೆ ರಾಹುಲ್‌ ಗಾಂಧಿ ಜತೆ ಕೈ ಜೋಡಿಸುತ್ತಿದ್ದೀರಿ. ನೀವು ಸತ್ಯವನ್ನೇ ಹೇಳಿದ್ದೀರಿ. ಎಂದು ತಜೀಂದರ್‌ ಪಾಲ್‌ ಟೀಕಿಸಿದ್ದಾರೆ.

ಸ್ವಲ್ಪ ಸಮಯದಲ್ಲೇ ಆಪ್‌ ತನ್ನ ಟ್ವೀಟ್‌ಅನ್ನು ಡಿಲೀಟ್‌ ಮಾಡಿತ್ತು. ಮತ್ತೆ ಟ್ವೀಟ್‌ ಮಾಡಿದ ತಜೀಂದರ್‌ ಪಾಲ್‌ ‘ನೀವು ತಪ್ಪು ಮಾಡಿದ್ದೀರಿ’ ಎಂದು ಸ್ಕ್ರೀನ್‌ಶಾಟ್‌ ಸಮೇತ ಪೋಸ್ಟ್‌ ಮಾಡಿದ್ದಾರೆ. ಇದೀಗ ಈ ಸ್ಕ್ರೀನ್‌ಶಾಟ್‌ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Comments are closed.