ರಾಷ್ಟ್ರೀಯ

ಮೇಜರ್‌ ಪತ್ನಿ ಹಂತಕ ಮೇಜರ್‌ ನಿಖಿಲ್‌ ಹಾಂಡನಿಗೆ ಡೇಟಿಂಗ್‌ ಖಯಾಲಿ

Pinterest LinkedIn Tumblr


ಹೊಸದಿಲ್ಲಿ: ಮೋಹ ಪಾಶಕ್ಕೆ ಬೀಳಲಿಲ್ಲ ಎಂಬ ಕಾರಣಕ್ಕೆ ಮೇಜರ್‌ ಅಮಿತ್‌ ದ್ವಿವೇದಿ ಅವರ ಪತ್ನಿ ಶೈಲಜಾ ದ್ವಿವೇದಿ ಅವರನ್ನು ಕೊಲೆ ಮಾಡಿದ ಮೇಜರ್‌ ನಿಖಿಲ್‌ ಹಾಂಡ ಡೇಟಿಂಗ್‌ ಸೈಟ್‌ಗಳ ಮೂಲಕ ಮಹಿಳೆಯರ ಜತೆ ಚೆಲ್ಲಾಟ ಆಡುವುದೇ ಒಂದು ಖಯಾಲಿ ಎಂದು ತನಿಖೆ ವೇಳೆ ಬಯಲಾಗಿದೆ.

ಈತ ಹಲವಾರು ನಕಲಿ ಫೇಸ್‌ ಬುಕ್‌ ಅಕೌಂಟ್‌ಗಳನ್ನು ಹೊಂದಿದ್ದ, ಅವುಗಳ ಮೂಲಕ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದ. ಶೈಲಜಾ ಅವರ ಕೊಲೆ ಮಾಡಿದ ಬಳಿಕ ತಕ್ಷಣವೇ ಮಾಡಿದ ಕರೆಯನ್ನು ಬೆಂಬತ್ತಿ ಹೋದ ಪೊಲೀಸರಿಗೆ ಅದರಲ್ಲಿ ಆತ ಡೇಟಿಂಗ್‌ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಸಿಕ್ಕಿದ್ದಾಳೆ.

ಗಂಡನಿಂದ ದೂರವಾದ ಈಕೆಗೆ ಹಾಂಡನ ಮೇಜರ್‌ ವೃತ್ತಿ, ಶೈಲಜಾ ದ್ವಿವೇದಿಯ ಜತೆಗಿನ ಸಂಬಂಧವೂ ಗೊತ್ತಿತ್ತು.

Comments are closed.