ರಾಷ್ಟ್ರೀಯ

ಅಸ್ಸಾಂ ಪ್ರವಾಹ: ಮೃತರ ಸಂಖ್ಯೆ 31ಕ್ಕೆ ಏರಿಕೆ!

Pinterest LinkedIn Tumblr


ಗುವಾಹಟಿ : ಅಸ್ಸಾಂ ಪ್ರವಾಹಕ್ಕೆ ಇಂದು ಇನ್ನೂ ಮೂವರು ಬಲಿಯಾಗುವುದರೊಂದಿಗೆ ಮೃತರ ಸಂಖ್ಯೆ 31ಕ್ಕೇರಿದೆ.

ಹಾಗಿದ್ದರೂ ಅಸ್ಸಾಂ ಪ್ರವಾಹ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಅಸ್ಸಾಂ ಪ್ರವಾಹದಿಂದಾಗಿ ಸುಮಾರು 68,000 ಮಂದಿ ಬಾಧಿತರಾಗಿದ್ದಾರೆ.

ಧೇಮಜೀ, ಲಖೀಂಪುರ, ಬಿಶ್ವನಾಥ್‌, ಚಾರೈದೇವ್‌, ಕಚಾರ್‌, ಕರೀಂ ಗಂಜ್‌ ಮತ್ತು ಹೈಲಕಂಡಿ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಪೀಡಿತವಾಗಿದೆ.

ಪ್ರವಾಹದಿಂದ ಅತ್ಯಂತ ಘೋರವಾಗಿ ಪೀಡಿತವಾಗಿರುವ ಕರೀಂಗಂಜ್‌ ಜಿಲ್ಲೆಯೊಂದರಲ್ಲೇ ಪ್ರವಾಹ ಪೀಡಿತರ ಸಂಖ್ಯೆ 44,000 ಇದೆ.

Comments are closed.