ರಾಷ್ಟ್ರೀಯ

ಕಾರ್ಮಿಕನ ಮನೆಯಲ್ಲಿ 112 ನಾಗರಹಾವುಗಳು!

Pinterest LinkedIn Tumblr


ಮನೆಯೊಳಗೆ ಒಂದು ಹಾವು ಬಂದು ಸೇರಿಕೊಂಡಿದೆ ಅಂದುಕೊಳ್ಳಿ. ಅದನ್ನು ಮನೆಯಿಂದ ಓಡಿಸಿದ ಬಳಿಕವೂ ವಾರಗಟ್ಟಲೆ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ಹಗ್ಗ ನೋಡಿದರೂ ಹಾವೆಂದು ಗಾಬರಿಬೀಳುವವರೇ ಹೆಚ್ಚು.

ಹೀಗಿರುವಾಗ, ಮನೆಯೊಳಗೆ ಬರೋಬ್ಬರಿ 112 ನಾಗರಹಾವುಗಳು ಒಮ್ಮಿಂದೊಮ್ಮೆಲೇ ಪ್ರತ್ಯಕ್ಷವಾದರೆ? ಇದು ಸಿನಿಮಾದ ಕಥೆಯಲ್ಲ. ಒಡಿಶಾದ ಭದ್ರಕ್‌ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿನ ಕಾರ್ಮಿಕನೊಬ್ಬನ ಮಣ್ಣಿನ ಮನೆಯಲ್ಲಿ ಈ ಘಟನೆ ನಡೆದಿದೆ.

ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಭಾರೀ ಸಂಖ್ಯೆಯ ನಾಗರಹಾವಿನ ಮರಿಗಳು ಅತ್ತಿಂದಿತ್ತ ಓಡಾಡು ತ್ತಿದ್ದವಂತೆ. ಗಾಬರಿಗೊಂಡ ಆತ ಕೂಡಲೇ ಅರಣ್ಯಾಧಿಕಾರಿ ಗಳಿಗೆ ಸುದ್ದಿ ಮುಟ್ಟಿಸಿದ್ದು, ಅವರು ಬಂದು 20 ಮೊಟ್ಟೆಗಳು, 110 ವಿಷಸರ್ಪದ ಮರಿಗಳು, 2 ದೊಡ್ಡ ಹಾವುಗಳನ್ನು ಹಿಡಿದಿದ್ದಾರೆ. ಈಗ ಈ ಹಾವುಗಳು ಬಂದಿದ್ದಾದರೂ ಎಲ್ಲಿಂದ ಎಂದು ತನಿಖೆ ನಡೆಯುತ್ತಿದೆಯಂತೆ.

Comments are closed.