
ಪಟನಾ: ಬಾಯಿ ಚಪಲಕ್ಕಾಗಿ ಕಿತ್ತ ಮಾವಿನ ಹಣ್ಣು, 10 ವರ್ಷ ಬಾಲಕನ ಜೀವನವನ್ನೇ ಅಂತ್ಯಗೊಳಿಸಿದೆ.
ಹಾಗೆಂದು ಹಣ್ಣು ಕೀಳಲು ಹೋದವ ಬಿದ್ದು ಸಾವನ್ನಪ್ಪಿದ್ದಾನೆ ಅಂದುಕೊಳ್ಳಬೇಡಿ. ಪಟನಾದ ಖಗೇರಿಯಾ ಜಿಲ್ಲೆಯ ಪಥ್ರಹ ಗ್ರಾಮದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಸತ್ಯಂ ಕುಮಾರ್ (10) ಮೃತ ದುರ್ದೈವಿ.
ಸತ್ಯಂ ಕುಮಾರ್ ಹಾಗೂ ಆತನ ಸ್ನೇಹಿತರು ಬರೋಹ್ ಚೌದರಿ ಎಂಬವರಿಗೆ ಸೇರಿದ ಮಾವಿನ ಹಣ್ಣಿನ ತೋಟದಿಂದ ಹಣ್ಣು ಕೀಳಲು ಮರ ಹತ್ತಿದ್ದಾರೆ. ಮಾವಿನ ತೋಟ ಕಾಯುತ್ತಿದ್ದ ಮಕುನಿ ಎಂಬ ವಾಚ್ಮ್ಯಾನ್ ಬಂದೂಕಿನಿಂದ ಹಾರಿಸಿದ ಗುಂಡು ಸತ್ಯಂಗೆ ತಗಲಿ ಮರದಿಂದ ಕೆಳಕ್ಕೆ ಬಿದ್ದು, ಮೃತಪಟ್ಟಿದ್ದಾನೆ. ಘಟನಾ ಸ್ಥಳದಲ್ಲಿ ಸಿಕ್ಕಿದ ಕಾಟ್ರಿಡ್ಜ್ ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮಕುನಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ನೀಸಿದ್ದಾರೆ. ಗೋಗ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.