ರಾಷ್ಟ್ರೀಯ

ಪ್ರಧಾನಿ ಮೋದಿಯಿಂದ ರಾಹುಲ್‌ ಗಾಂಧಿಯ 48ನೇ ಹುಟ್ಟುಹಬ್ಬಕ್ಕೆ ಶುಭಾಶಯ

Pinterest LinkedIn Tumblr


ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ 48ನೇ ಹುಟ್ಟುಹಬ್ಬದ ಇಂದಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.

“ನಿಮಗೆ ದೇವರು ಸುದೀರ್ಘ‌ ಬದುಕು ಮತ್ತು ಆರೋಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ರಾಹುಲ್‌ ಗಾಂಧಿ ಅವರ 48ನೇ ಹುಟ್ಟುಹಬ್ಬವನ್ನು ರಾಷ್ಟ್ರ ರಾಜಧಾನಿಯಲ್ಲಿನ ಪಕ್ಷದ ಪ್ರಧಾನ ಕಾರ್ಯಾಲಯದ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಅದ್ದೂರಿಯಾಗಿ ಆಚರಿಸುತ್ತಿರುವ ವರದಿಗಳು ಬಂದಿವೆ.

ರಾಜೀವ್‌ – ಸೋನಿಯಾ ದಂಪತಿಗೆ ರಾಹಲ್‌ ಹುಟ್ಟಿದ್ದು 1970ರ ಜೂನ್‌ 19ರಂದು. ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ಸಂಸದರಾಗಿರುವ ರಾಹುಲ್‌ ಅವರು ಈಚೆಗಷ್ಟೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

Comments are closed.