ರಾಷ್ಟ್ರೀಯ

ಸಾರ್ವಜನಿಕ ಶೌಚಾಲಯದಲ್ಲಿ ಬಾಲಕಿಯ ಆತ್ಯಾಚಾರಗೈದ 65ರ ಆರೋಪಿ: ಬಂಧನ

Pinterest LinkedIn Tumblr


ಥಾಣೆ: ಥಾಣೆ ಜಿಲ್ಲೆಯ ಕಲ್ಯಾಣ್‌ನ ಕೋಲ್ಸೆವಾಡಿಯಲ್ಲಿ ಸಾರ್ವಜನಿಕ ಶೌಚಾಲಯದೊಳಗೆ ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 65 ವರ್ಷ ಪ್ರಾಯದ ಕಮೂನ್‌ದಾಸ್‌ ಸಮರೂದಾಸ್‌ ಮಾಣಿಕ್‌ಪುರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರಕ್ಕೆ ಗುರಿಯಾದ ಬಾಲಕಿಯ ಮನೆಯವರು ನೀಡಿದ ದೂರಿನ ಪ್ರಕಾರ ಪೊಲೀಸರು ಆರೋಪಿಯನ್ನು ಸೆರೆ ಹಿಡಿದರು. ಬಾಲಕಿಯು ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದಾಗ ಆರೋಪಿಯು ಆಕೆಯ ಮೇಲೆ ರೇಪ್‌ ಎಸಗಿದ್ದ.

ಆರೋಪಿಯು ಕೋಲ್ಸೆವಾಡಿಯ ಸೂಚಕ್‌ ನಾಕಾ ಎಂಬ ಪ್ರದೇಶದ ನಿವಾಸಿಯಾಗಿದ್ದಾನೆ. ಆತನ ವಿರುದ್ಧ ಐಪಿಸಿ ಮತ್ತು ಪೋಕ್‌ಸೋ ಕಾಯಿದೆಯಡಿ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Comments are closed.