ರಾಷ್ಟ್ರೀಯ

ವರದಕ್ಷಿಣೆಗಾಗಿ ಹೆಂಡತಿ-ಮಗನ ಜೀವಂತ ದಹನ ಮಾಡಿದ ಧನಪಿಶಾಚಿ ಪತಿ

Pinterest LinkedIn Tumblr


ಬರೇಲಿ: ಧನಪಿಶಾಚಿ ಪತಿಯೊಬ್ಬ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪತ್ನಿ ಮತ್ತು 2 ವರ್ಷದ ಪುತ್ರನನ್ನು ಜೀವಂತವಾಗಿ ದಹಿಸಿದ ಘೋರ ಕೃತ್ಯ ಬರೇಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್ (22) ಮತ್ತು ಮಗ ಶನಿವಾರ ಸಾವನ್ನಪ್ಪಿದ್ದು, ಮೃತಳ ತವರಿನವರು ನೀಡಿದ ಆರೋಪದ ಮೇಲೆ ಪತಿ ಸೇರಿದಂತೆ 6 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವರದಕ್ಷಿಣೆ ತರುವಂತೆ ಮಗಳ ಪತಿ ಮನೆಯವರು ಸದಾ ಹಿಂಸಿಸುತ್ತಿದ್ದರು ಎಂದು ಮೃತಳ ಪೋಷಕರು ದೂರಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಆರೋಪಿ ಸೌರಭ್, ಆತನ ಇಬ್ಬರು ಸಹೋದರರು, ಅತ್ತಿಗೆ, ತಾಯಿ, ಅಜ್ಜ (ತಾಯಿ ತಂದೆ), ವಿರುದ್ಧ ಭಾರತೀಯ ದಂಡ ಸಂಹಿತೆ 304 ಬಿ (ವರದಕ್ಷಿಣೆ ಸಾವು), 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಆರೋಪಿ ಸೌರಭ್, ಕಾಜಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ.

ನಮ್ಮದೇ ಆದ ಮನೆ ಇಲ್ಲದಿದ್ದುದರಿಂದ ಅಜ್ಜನ ಮನೆಯಲ್ಲಿ ವಾಸವಾಗಿದ್ದೆವು. ನನ್ನ ಪತ್ನಿ ಮತ್ತು ಅಜ್ಜಿ ನಡುವೆ ಸದಾ ಜಗಳವಾಗುತ್ತಿತ್ತು. ಶುಕ್ರವಾರ ರಾತ್ರಿ ಸಹ ಅವರಿಬ್ಬರ ನಡುವೆ ಜಗಳವಾಗಿದ್ದು, ನಾವೆಲ್ಲರೂ ಮಲಗಿದ ಬಳಿಕ ಕಾಜಲ್ ಮಗನ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಎಂದಾತ ಹೇಳಿದ್ದಾನೆ.

Comments are closed.