ರಾಷ್ಟ್ರೀಯ

ಭಿಕ್ಷುಕಿಯ 1 ವರ್ಷದ ಮಗುವಿನ ಅಪಹರಣ, ಅತ್ಯಾಚಾರ, ಹತ್ಯೆ

Pinterest LinkedIn Tumblr


ಪುಣೆ: 22 ವರ್ಷದ ಕೂಲಿ ಕಾರ್ಮಿಕನೋರ್ವ 1 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ ಘೋರ, ಅಮಾನುಷ ಘಟನೆ ಪುಣೆಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಆರೋಪಿ ಮಲ್ಹರಿ ಹರಿಭಾವು ಬನ್ಸಾದ್ ಅಲಿಯಾಸ್ ‘ಪಪ್ಯಾ ಹಡ್ಡಿ’ ಎಂಬಾತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮೃತ ಬಾಲಕಿ ಅತಿ ಬಡ ಕುಟುಂಬದವಳಾಗಿದ್ದು, ವಾಸಿಸಲು ಮನೆ ಕೂಡ ಇರಲಿಲ್ಲ. ನಾಲ್ಕನೇ ಮಗಳು (ಬಲಿಪಶು) ಹುಟ್ಟಿದ ಬಳಿಕ ಪತಿ ತನ್ನನ್ನು ತೊರೆದಿದ್ದು ಮಕ್ಕಳ ಹೊಟ್ಟೆ ತುಂಬಿಸಲು ಭಿಕ್ಷಾಟನೆ ಮಾಡಿ ಬದುಕುತ್ತಿದ್ದುದಾಗಿ ಮೃತ ಮಗುವಿನ ತಾಯಿ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾಳೆ.

ಗುರುವಾರ ರಾತ್ರಿ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ಲೋನಿ ಕಲ್ಬೋರ್ ರೈಲು ನಿಲ್ದಾಣದ ಬಳಿಯಲ್ಲಿನ ಬಟ್ಟೆ ಅಂಗಡಿ ಮುಂದೆ ಮಲಗಿದ್ದಳು. ಮಧ್ಯರಾತ್ರಿ ಎಚ್ಚರವಾದಾಗ ಪುಟ್ಟ ಮಗಳು ನಾಪತ್ತೆಯಾಗಿರುವುದು ಆಕೆಯ ಗಮನಕ್ಕೆ ಬಂದಿದೆ. ತನ್ನ ಉಳಿದ ಮೂವರು ಮಕ್ಕಳನ್ನು ಎಬ್ಬಿಸಿದ ಆಕೆ ಮಗುವಿಗಾಗಿ ಸುತ್ತಮುತ್ತಲು ಶೋಧ ನಡೆಸಿದ್ದಾಳೆ. ಬಳಿಕ ಸುಮಾರು 2.30ರಷ್ಟೊತ್ತಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ, ಎಂದು ಇನ್ಸಪೆಕ್ಟರ್ ಕ್ರಾಂತಿಕುಮಾರ್ ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ರೈಲು ನಿಲ್ದಾಣದ ಬಳಿ ಮಗುವೊಂದು ಪ್ರಜ್ಞಾಹೀನವಾಗಿ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದ ತಾಯಿ ಅದು ತನ್ನದೇ ಮಗುವೆಂದು ಗುರುತಿಸಿದ್ದಾಳೆ.

ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಯಿತು.

ಮಗುವನ್ನು ಅಪಹರಿಸಲಾದ ಸಿಸಿ ಕ್ಯಾಮರಾ ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.