ರಾಷ್ಟ್ರೀಯ

ಉಸುಕು ತುಂಬಿದ ಟ್ರಕ್‌ ಮನೆಗೆ ನುಗ್ಗಿ 6 ಮಂದಿಯ ಸಾವು

Pinterest LinkedIn Tumblr


ಕಾನ್ಪುರ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 2ರಲ್ಲಿನ ಮಹಾರಾಜಪುರ ಸಮೀಪ ಉಸುಕು ತುಂಬಿದ್ದ ಟ್ರಕ್‌, ಮನೆಗೆ ನುಗ್ಗಿದ ಪರಿಣಾಮವಾಗಿ ಮನೆಯಲ್ಲಿ ಮಲಗಿಕೊಂಡಿದ್ದ ಒಂದೇ ಕುಟುಂಬದ ಆರು ಮಂದಿ ಮಡಿದು ಇತರ ನಾಲ್ವರು ಗಾಯಗೊಂಡ ಘಟನೆ ವರದಿಯಾಗಿದೆ.

ಮೃತರನ್ನು ಕಲ್ಲೂ ಕುರೇಶಿ 55, ಆತನ ಪುತ್ರ ವಸೀಂ ಕುರೇಶಿ 25, ಸೊಸೆ ಯಾಸ್ಮಿನ್‌ 23, ಪುತ್ರಿ ಶಮೀಮುನ್‌ 18, ಮೊಮ್ಮಕ್ಕಳಾದ ಝರೀನಾ 16 ಮತ್ತು ಸೊಹಾನಾ 14 ಎಂದು ಗುರುತಿಸಲಾಗಿದೆ.

ಟ್ರಕ್‌ ಚಾಲಕ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಅದು ಕಚ್ಚಾ ಮನೆಯೊಂದಕ್ಕೆ ನುಗ್ಗಿ ಆರು ಜೀವಗಳನ್ನು ಬಲಿ ಪಡೆಯಿತೆಂದು ಗ್ರಾಮಾಂತರ ಎಸ್‌ಪಿ ಪ್ರದ್ಯುಮ್ನ ಸಿಂಗ್‌ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಟ್ರಕ್‌ ಮೊದಲು ಕಚ್ಚಾ ಮನೆಗೆ ಢಿಕ್ಕಿ ಹೊಡೆದು ಬಳಿಕ ನೆರೆಮನೆಗೆ ನುಗ್ಗಿತು; ಆಗ ಮನೆಯವರೆಲ್ಲ ನಿದ್ರೆಯಲ್ಲಿದ್ದರು.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಅಪರಿಚಿತ ಟ್ರಕ್‌ ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ; ತನಿಖೆ ನಡೆದಿದೆ.

Comments are closed.