ಶ್ರೀನಗರ : ಭಾರತದೊಳಗೆ ನುಸುಳಿ ಬರಲು ಗಡಿಯಲ್ಲಿ ಭಾರೀ ಸಂಖ್ಯೆಯ ಉಗ್ರರು ಕಾಯುತ್ತಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
ಕನಿಷ್ಠ 35 ಲಷ್ಕರ್ ಎ ತಯ್ಯಬ ಉಗ್ರರು ಜಮ್ಮು ಕಾಶ್ಮೀರದ ನಾಲ್ಕು ಕಡೆಗಳಿಂದ ಗಡಿ ದಾಟಿ ಒಳನುಸುಳಿ ಬರಲು ಸಿದ್ಧರಾಗಿ ನಿಂತಿದ್ದಾರೆ ಎಂದು ಗುಪ್ತಚರ ದಳ ಹೇಳಿದೆ.
ಮಾಚಿಲ್ ಎದುರು ಭಾಗದಲ್ಲಿರುವ ಶಾರ್ಡಿ ಎಂಬಲ್ಲಿನ ಗಡಿ ಪ್ರದೇಶದಲ್ಲಿ 18 ಎಲ್‌ಇಟಿ ಉಗ್ರರು ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ನೌಗಾಂವ್ ಎದುರಿನ ಲೀಪಾ ಎಂಬಲ್ಲಿಂದ ಒಳನುಸುಳಿ ಬರಲು 8 ಉಗ್ರರು ಕಾದಿದ್ದಾರೆ.
ಹಾಗೆಯೇ ಪೂಂಚ್ ಎದುರುಗಡೆಯ ಕಾಲು ದೀ ಧೇರಿ ಎಂಬಲ್ಲಿಂದ ಒಳನುಸುಳಿ ಬರಲು 6 ಉಗ್ರರು ಕಾದಿದ್ದಾರೆ; ಕೋಟ್‌ಲೀ ಪ್ರದೇಶದಲ್ಲಿ ಒಳನುಸುಳುವುದಕ್ಕೆ ಮೂವರು ಉಗ್ರರು ಸಿದ್ಧರಾಗಿದ್ದಾರೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
Comments are closed.