ಅಮೆರಿಕ ಮತ್ತಿತರ ದೇಶಗಳಲ್ಲಿರುವ ವರ ಎಂದು ಮದುವೆಯಾಗಿ ಮೋಸ ಹೋಗುವ ಯುವತಿಯರ ನೆರವಿಗೆ ಕೇಂದ್ರ ಮುಂದೆ ಬಂದಿದೆ. ಮದುವೆಯಾದ ಬಳಿಕ ಮೋಸ ಮಾಡುವ ಎನ್‌ಆರ್‌ಐಗಳ ಆಸ್ತಿ ಜಪ್ತಿ, ಪಾಸ್‌ಪೋರ್ಟ್ ರದ್ದು ಮಾಡುವ ಬಗ್ಗೆ ಕೇಂದ್ರ ತೀರ್ಮಾನ ಮಾಡಿದೆ.
ಜಿಒಎಂ ತೀರ್ಮಾನಗಳೇನು?
ತಲೆಮರೆಸಿಕೊಂಡ ಎನ್‌ಆರ್‌ಐಗಳು ಭಾರತದಲ್ಲಿ ಹೊಂದಿರುವ ಆಸ್ತಿ ಮುಟ್ಟುಗೋಲು
ಎನ್‌ಆರ್‌ಐಗಳಿಂದ ಉತ್ತರ ಸಿಗದ ಸಮನ್ಸ್‌ಗಳನ್ನು ವಿದೇಶಾಂಗ ಇಲಾಖೆ ಪ್ರತ್ಯೇಕ ವೆಬ್‌ಸೈಟ್‌ನಲ್ಲಿ ಪ್ರಕಟಣೆ
ಸಮನ್ಸ್‌ಗಳಿಗೆ ಉತ್ತರಿಸದ, ನ್ಯಾಯಾಲಯಕ್ಕೆ ಹಾಜರಾಗದ ಎನ್‌ಆರ್‌ಐಗಳ ಪಾಸ್ ಪೋರ್ಟ್ ರದ್ದು
ಸದ್ಯದ ವ್ಯವಸ್ಥೆ
ಅನಿವಾಸಿ ಭಾರತೀಯರ ವಿವಾಹ ನೋಂದಣಿಗೆ ನಿಗದಿತ ಸಮಯ ಈಗ ಇಲ್ಲ
ಕಾನೂನು ಆಯೋಗ ಶಿಫಾರಸು ಮಾಡಿದ ಪ್ರಕಾರ 30 ದಿನಗಳಲ್ಲಿ ಮದುವೆ ನೋಂದಣಿ ಮಾಡಬೇಕು.
ಎಲ್ಲಾ ಎನ್‌ಆರ್‌ಐಗಳ ವಿವಾಹವನ್ನು ಏಳು ದಿನಗಳ ಒಳಗಾಗಿ ನೋಂದಣಿ ಕಡ್ಡಾ ಯ. ಇಲ್ಲದಿದ್ದಲ್ಲಿ ಪಾಸ್‌ಪೋರ್ಟ್, ವೀಸಾ ನೀಡದೇ ಇರಲು ತೀರ್ಮಾನ.
ಏನಿದು ವಿಚಾರ?
ಹರ್ಯಾಣ ರಾಜ್ಯದಲ್ಲಿ ಇಂಥ ಹಲವಾರು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಗಳ ಸಮನ್ಸ್‌ಗಳಿಂದ ತಪ್ಪಿಸಿಕೊಳ್ಳಲು ತಮ್ಮ ಗುರುತು, ವಿಳಾಸಗಳನ್ನೂ ಬದಲಾಯಿಸಿಕೊಂಡ ಭೂಪರೂ ಇದ್ದಾರೆ. ಇಂಥ ವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಸಚಿವರ ಸಮಿತಿ (ಜಿಒಎಂ) ಶಿಫಾರಸು ಮಾಡಿದೆ.
ಯಾರಿದ್ದಾರೆ ಜಿಒಎಂನಲ್ಲಿ?
ರಾಜ ನಾಥ್ ಸಿಂಗ್, ಗೃಹ ಸಚಿವ
ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
ರವಿಶಂಕರ್ ಪ್ರಸಾದ್, ಕಾನೂನು ಸಚಿವ
ಮೇನಕಾ ಗಾಂಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
Comments are closed.