ರಾಷ್ಟ್ರೀಯ

72 ಗಂಟೆಯಲ್ಲಿ ಹಂತಕರನ್ನು ಹುಡುಕಿ ಹತ್ಯೆಮಾಡಿ: ಸೇನಾ ಜವಾನ ಔರಂಗಜೇಬ್‌ ತಂದೆ

Pinterest LinkedIn Tumblr


ಜಮ್ಮು : ತನ್ನ ಪುತ್ರ, ಸೇನಾ ಜವಾನ ಔರಂಗಜೇಬ್‌ ನನ್ನು ಅಪಹರಿಸಿ ಹತ್ಯೆಗೈದವರನ್ನು 72 ತಾಸೊಳಗೆ ಹುಡುಕಿ ಕೊಲ್ಲಬೇಕೆಂದು ಆತನ ತಂದೆ, ನಿವೃತ್ತ ಯೋಧ, ಸೇನೆಗೆ ಗಡುವು ಹಾಕಿದ್ದಾರೆ.

ಇಂದಿಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹತ ಯೋಧ ಔರಂಗಜೇಬ್‌ ಅವರ ತಂದೆ, “ನನ್ನ ಪುತ್ರನನ್ನು ಅಪಹರಿಸಿ ಕೊಂದವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದಕ್ಕೆ ಭಾರತ ಸರಕಾರಕ್ಕೆ ಏನು ಅಡ್ಡಿ ಇದೆ ?ಒಂದೊಮ್ಮೆ ಸರಕಾರ 72 ತಾಸೊಳಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಸ್ವತಃ ನಾನೇ ನನ್ನ ಪುತ್ರ ಔರಂಗಜೇಬ್‌ ನನ್ನು ಕೊಂದವರ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

“ಜಮ್ಮು ಕಾಶ್ಮೀರದಲ್ಲಿ ಹುತಾತ್ಮರ ಸಾವಿನ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ; ಪ್ರತ್ಯೇಕತವಾದಿಗಳು ಪಾಕ್‌ ಪರ ಸಹಾನುಭೂತಿ ಉಳ್ಳವರಾಗಿದ್ದಾರೆ’ ಎಂದು ನಿವೃತ್ತ ಯೋಧ ಹೇಳಿದರು.

‘2003ರಿಂದ ಜಮ್ಮು ಕಾಶ್ಮೀರವನ್ನು ಉಗ್ರರಿಗೆ ಏಕೆ ಮುಕ್ತ ಮಾಡಲಾಗಿಲ್ಲ’ ಎಂದು ಪ್ರಶ್ನಿಸಿದ ಅವರು “ನನ್ನ ಪುತ್ರ ಔರಂಗಜೇಬ್‌ನ ಹತ್ಯೆಯಿಂದಾಗಿ ನನಗೆ, ನನ್ನ ಕುಟುಂಬದವರಿಗೆ, ನಾನು ಸೇವೆ ಸಲ್ಲಿಸಿದ್ದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಸರಕಾರಕ್ಕೆ ದೊಡ್ಡ ಹಿನ್ನಡೆ ಆಗಿದೆ’ ಎಂದು ಹೇಳಿದರು.

Comments are closed.