ರಾಷ್ಟ್ರೀಯ

ತಾಯಿ ಮಗುವಿನ ಬಣ್ಣ ವ್ಯತ್ಯಾಸ: ಮಕ್ಕಳ ಕಳ್ಳಿ ಎಂದು ಮಹಿಳೆಗೆ ಥಳಿತ!

Pinterest LinkedIn Tumblr


ಗಾಜಿಯಾಬಾದ್‌: ತಾಯಿ ಮಗುವಿನ ಬಣ್ಣ ವ್ಯತ್ಯಾಸವಿದ್ದ ಹಿನ್ನೆಲೆಯಲ್ಲಿ ತಾಯಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದಾಳೆ. ತಾನೇ ಮಗುವಿನ ನಿಜವಾದ ತಾಯಿ ಎಂದು ಎಷ್ಟೇ ಹೇಳಿಕೊಂಡರೂ ಯಾರು ನಂಬದ ಪರಿಸ್ಥಿತಿಯನ್ನು ಮೀರತ್‌ನ ಮಹಿಳೆಯೊಬ್ಬಳು ಎದುರಿಸಿದ್ದಾಳೆ.

ಹೌದು. ಮಗು ತನ್ನದೆಂದು ನಿರೂಪಿಸಲು, ಸಾರ್ವಜನಿಕರಿಂದ ಹೊಡೆಸಿಕೊಂಡು, ಪೊಲೀಸ್‌ ಠಾಣೆಯಲ್ಲಿ ಕೆಲ ಗಂಟೆ ವಿಚಾರಣೆ ಎದುರಿಸಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಗು ಹಾಗೂ ತಾಯಿಯ ಮೈ ಬಣ್ಣ ವ್ಯತ್ಯಾಸವಿದ್ದದರಿಂದ ಸಾರ್ವಜನಿಕರಿಂದ ಹಲ್ಲೆಗೊಳಗಾದ ಅಮಾನವೀಯ ಘಟನೆ ಕೊತ್ವಾಲಿಯಲ್ಲಿ ಬೆಳಕಿಗೆ ಬಂದಿದೆ.

ಮೀರತ್‌ ಮೂಲದ ಮಹಿಳೆ ತನ್ನ 2 ತಿಂಗಳ ಮಗುವನ್ನು ಎತ್ತಿಕೊಂಡು ನಗರದ ರಸ್ತೆಯೊಂದರಲ್ಲಿ ತೆರಳಿದ್ದಾಳೆ. ಸ್ಥಳೀಯರು ಇವಳನ್ನು ಮಕ್ಕಳ ಕಳ್ಳಿ ಎಂದು ಭಾವಿಸಿ, ಮಗುವಿನ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ಮಗುವಿನ ಬಣ್ಣ ಬಿಳಿ ಇದ್ದು, ತಾಯಿ ಕಪ್ಪಗಿದ್ದ ಕಾರಣ ಮಹಿಳೆಯನ್ನು ಕಳ್ಳಿ ಎಂಬುದನ್ನು ನಿರ್ಧರಿಸಿದ ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಮೀರತ್‌ ಪೊಲೀಸರನ್ನು ಸಂಪರ್ಕಿಸಿ, ಮಹಿಳೆ ನೀಡಿರುವ ಮಾಹಿತಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಗು ಮಹಿಳೆಯದ್ದೇ ಎಂದು ಪೊಲೀಸರಿಗೆ ಖಚಿತವಾಗಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಮಹಿಳೆಯನ್ನು ಬಿಡುಗಡೆ ಮಾಡಿದ್ದಾರೆ. ತಾಯಿ ಹಾಗೂ ಮಗುವಿನ ಬಣ್ಣ ವ್ಯತ್ಯಾಸವಿದ್ದ ಪರಿಣಾಮ ಈ ಅವಾಂತರ ಸೃಷ್ಟಿಯಾಗಿದೆ.

Comments are closed.