ರಾಷ್ಟ್ರೀಯ

ದನ ಕದ್ದ ಇಬ್ಬರನ್ನು ಥಳಿಸಿ ಕೊಂದ ಗೋ ರಕ್ಷಕರು

Pinterest LinkedIn Tumblr


ಜಾರ್ಖಂಡ್‌: ಜಾರ್ಖಂಡ್‌ನ‌ ಸಂತಾಲ್‌ ಗ್ರಾಮದಲ್ಲಿ ದನ ಕದ್ದೊಯ್ಯುತ್ತಿದ್ದ ಇಬ್ಬರನ್ನು ಗೋರಕ್ಷಕರು ಹಿಡಿದು ಚಚ್ಚಿ ಸಾಯಿಸಿರುವ ಘಟನೆ ವರದಿಯಾಗಿದೆ.

ಗೋರಕ್ಷಕರಿಂದ ಹತ್ಯೆಗೀಡಾಗಿರವವರನ್ನು ಮುರ್ತಜಾ ಅನ್ಸಾರಿ ಮತ್ತು ಚಾರ್ಕು ಅನ್ಸಾರಿ ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಇನ್ನೂ ಮೂವರು ಗೋ ಕಳ್ಳರು ಹೇಗೋ ತಪ್ಪಿಸಿಕೊಂಡು ಪಾರಾಗಿದ್ದಾರೆ.

ಪೊಲೀಸರು ಈ ತನಕ ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜತಗೆ ಈ ಘಟನೆ ನಡೆದ ಸಂತಾಲ್‌ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಗೊಡ್ಡಾ ಎಸ್‌ಪಿ ಹೇಳಿರುವ ಪ್ರಕಾರ ಐವರ ಒಂದು ಗುಂಪು ಒಂದು ಗ್ರಾಮದಿಂದ 12 ಎಮ್ಮೆಗಳನ್ನು ಕದ್ದು ಅವುಗಳನ್ನು ವಾಹನದಲ್ಲಿ ತುಂಬಿ ಇನ್ನೊಂದು ಗ್ರಾಮವಾಗಿ ಸಾಗುವಾಗ ಗೋರಕ್ಷಕರನಿಸಿಕೊಂಡವರು ಇವರನ್ನು ತಡೆದರು.

ಗೋರಕ್ಷಕರು ವಾಹನದಲ್ಲಿದ್ದ ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡರು. ಈ ನಡುವೆ ಐವರು ಗೋ ಕಳ್ಳರ ಪೈಕಿ ಮೂವರು ಓಡಿ ಪಾರಾದರು. ಉಳಿದಿಬ್ಬರಾದ ಮುರ್ತಜಾ ಮತ್ತು ಚಾರ್ಕು ಅವರನ್ನು ಗೋರಕ್ಷಕರು ಚಚ್ಚಿ ಸಾಯಿಸಿದರು.

ಗೋರಕ್ಷಕರಿಂದ ಹತ್ಯೆಗೀಡಾಗಿರುವ ಇವರು ಅಭ್ಯಾಸಬಲದ ಅಪರಾಧಿಗಳಾಗಿದ್ದು ಇವರ ವಿರುದ್ಧ ಗೋ ಕಳ್ಳಸಾಗಣೆಯ ಹಲವು ಕೇಸುಗಳು ಇವೆ ಎಂದು ಎಸ್‌ಪಿ ಹೇಳಿದರು.

ಎಸ್‌ಪಿ ಹೇಳಿರುವ ಪ್ರಕಾರ ಎರಡು ಎಫ್ಐಆರ್‌ ದಾಖಲಿಸಲಾಗಿದೆ : 1. ಗುಂಪಿನಿಂದ ನಡೆದಿರುವ ಕೊಲೆ ಕೃತ್ಯ, 2. ಎಮ್ಮೆಗಳ ಕಳವು.

ಜಾರ್ಖಂಡ್‌ನ‌ಲ್ಲಿ ಮೊತ್ತ ಮೊದಲ ಬಾರಿಗೆ ಗೋರಕ್ಷಕರಿಗೆ ಶಿಕ್ಷೆ ವಿಧಿಸಲ್ಪಟ್ಟ ಆಲಿಮುದ್ದೀನ್‌ ಅನ್ಸಾರಿ ಕೇಸನ್ನು ರಾಂಚಿಯ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಇತ್ಯರ್ಥಪಡಿಸಿದ ಮೂರು ತಿಂಗಳ ತರುವಾಯ ಗೋರಕ್ಷಕರಿಂದ ನಡೆದಿರುವ ಇನ್ನೊಂದು ಕೊಲೆ ಕೃತ್ಯ ಇದಾಗಿದೆ.

Comments are closed.