ರಾಷ್ಟ್ರೀಯ

ಅಪಘಾತಕ್ಕೊಳಗಾಗಿ ಪುಟ್ಟ ಗಾಯವಾಗದಿದ್ದರೂ ಉದ್ಯಮಪತಿಯೋರ್ವ 3 ಗಂಟೆ ಬಳಿಕ ಸಾವು!

Pinterest LinkedIn Tumblr


ಪುಣೆ: ಅಪಘಾತಕ್ಕೊಳಗಾಗಿ ಮೈಮೇಲೆ ಪುಟ್ಟ ಗಾಯವಾಗದಿದ್ದರೂ ಉದ್ಯಮಪತಿಯೋರ್ವ 3 ಗಂಟೆ ಬಳಿಕ ಸಾವನ್ನಪ್ಪಿದ ವಿಚಿತ್ರ ಘಟನೆ ಮುಂಬಯಿಯಲ್ಲಿ ನಡೆದಿದೆ.

36 ವರ್ಷದ ಧೀರೇನ್ ತಿವಾರಿ ಮೃತ ಉದ್ಯಮಪತಿಯಾಗಿದ್ದಾರೆ. ಶನಿವಾರ ಮಧ್ಯರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ಸೊಂದು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತವಾದರೂ ಅವರ ಮೈಮೇಲೆ ಒಂದು ಗೆರೆಯೂ ಬೀಳಲಿಲ್ಲ. ಆದರೆ ಮೂಗಿನ ಮೇಲೆ ಮಾತ್ರ ಕೆಂಪು ಗುರುತಾಗಿತ್ತು.

ಘಟನೆಯ ಮಾಹಿತಿ ಪಡೆದ ಪತ್ನಿ, ಸಹೋದರಿ ಮತ್ತು ಸ್ನೇಹಿತರು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಿದ್ಧತೆ ನಡೆಸಿದ್ದಾರೆ. ಆದರೆ ಧೀರೇನ್ ತಮಗೆ ಸಣ್ಣ ಗಾಯ, ನೋವು ಏನೂ ಆಗಿಲ್ಲ. ತುಂಬ ನಿದ್ದೆ ಬರುತ್ತಿದೆ. ಮನೆಗೆ ಹೋಗೋಣ ಎಂದು ಕ್ಯಾಬ್ ಮೇಲೆ ಅಮಾನೋರಾದಲ್ಲಿರುವ ಮನೆಯ ಕಡೆ ಹೊರಟಿದ್ದಾರೆ. ಮನೆಗೆ ಹೋಗಿ ತಲುಪಿ ಮಲಗಿದ್ದ ಧೀರೇನ್ ಅವರನ್ನು ಎಬ್ಬಿಸಿದಾಗ ಅವರು ಅಲುಗಾಡಲಿಲ್ಲ.

ಗಾಬರಿಯಾದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಅಪಘಾತವಾದಾಗ ಆಂತರಿಕ ಗಾಯಗಳಾಗಿರಬಹುದೆಂಬ ಶಂಕೆಯಿಂದ ಆಸ್ಪತ್ರೆಗೆ ಹೋಗೋಣ ಎಂದು ಒತ್ತಾಯಿಸಿದೆವು. ಆದರವರು ಒಪ್ಪಲಿಲ್ಲ. ದಾರಿಯುದ್ದಕ್ಕೂ ಗೊರಕೆ ಹೊಡೆಯುತ್ತಿದ್ದ ಅವರು ಯಾವಾಗ ಕೊನೆಯುಸಿರೆಳೆದರೆಂದು ತಿಳಿಯಲಿಲ್ಲ ಎಂದು ಅವರ ಪತ್ನಿ ನಂದಿನಿ ಹೇಳಿದ್ದಾರೆ.

Comments are closed.