ರಾಷ್ಟ್ರೀಯ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ದೇಹಾರೋಗ್ಯ ಸ್ಥಿರ

Pinterest LinkedIn Tumblr


ಕಾನ್ಪುರ : ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ 93ರ ಹರೆಯದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ದೇಹಾರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ನಡುವೆ ಅವರು ಬೇಗನೆ ಗುಣಮುಖರಾಗಲೆಂದು ಹಾರೈಸಿ ಇಲ್ಲಿನ ಅನೇಕ ಬಿಜೆಪಿ ಕಾರ್ಯಕರ್ತರು ಇಂದು ಹೋಮ – ಹವನ ಮಾಡಿಸುತ್ತಿದ್ದಾರೆ.

ವಾಜಪೇಯಿ ಅವರು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ಸಂಪೂರ್ಣವಾಗಿ ಗುಣಮುಖವಾಗುವ ವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ.

ನಿನ್ನೆ ಸೋಮವಾರ ಅಟಲ್‌ ಅವರು ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾದೊಡನೆಯೇ ದೇಶಾದ್ಯಂತದಿಂದ ಅಪಾರ ಸಂಖ್ಯೆಯ ಜನರು ತ್ವರಿತ ಚೇತರಿಕೆಯನ್ನು ಹಾರೈಸಿ ಶುಭ ಕಾಮನೆಗಳನ್ನು ರವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಎಲ್‌ ಕೆ ಆಡ್ವಾಣಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಜೆ ಪಿ ನಡ್ಡಾ, ಹರ್ಷ ವರ್ಧನ್‌, ರಾಹುಲ್‌ ಗಾಂಧಿ ಸಹಿತ ಅನೇಕ ನಾಯಕರು ಆಸ್ಪತ್ರೆಗೆ ತೆರಳಿ ವಾಜಪೇಯಿ ಅವರನ್ನು ಭೇಟಿಯಾಗಿದ್ದಾರೆ. ಇನ್ನೂ ಅನೇಕ ಕಾಂಗ್ರೆಸ್‌ ನಾಯಕರು ಟ್ವಿಟರ್‌ ಮೂಲಕ ಅಟಲ್‌ ಅವರು ಬೇಗನೆ ಗುಣಮುಖವಾಗಲೆಂದು ಹಾರೈಸಿದ್ದಾರೆ.

Comments are closed.