ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ಹಣ ಸುಲಿಗೆ: ಫ್ರೀಡಂ 251 ಫೋನ್ ತಯಾರಕ ಪೋಲೀಸರ ಬಲೆಗೆ

Pinterest LinkedIn Tumblr

ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ಗದ ಫೋನ್ ಫ್ರೀಡಂ 251 ಫೋನ್ ತಯಾರಕ ಮೋಹಿತ್ ಗೋಯಲ್ ನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರ ಇತ್ಯರ್ಥ ಸಂಬಂಧ ಮೋಹಿತ್ ಗೋಯಲ್ ಉದ್ಯಮಿಯಿಂದ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ಆರೋಪಿಸಿದ್ದು, ಈ ಸಂಬಂಧ ಮೋಹಿತ್ ಗೋಯಲ್ ಸೇರಿದಂತೆ ಮೂವರು ಆರೋಪಿಗಳನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಹಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ನೋಯ್ಡಾ ಪೊಲೀಸರು ಮೋಹಿತ್ ಗೋಯಲ್ ಸೇರಿ ಇತರರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಮೂಲಗಳು ತಿಳಿಸಿರುವಂತೆ ಕಳೆದ ಮಾರ್ಚ್ 6ರಂದು ಮಹಿಳೆಯೊಬ್ಬರು ತನ್ನ ಮೇಲೆ ಐವರು ಉದ್ಯಮಿಗಳು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆ ತಮ್ಮ ದೂರಿನಲ್ಲಿ ‘ತಾನು ನಗರದ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಐದು ಮಂದಿ ತನ್ನನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ವೆಸಗಿದ್ದಾರೆ ಎಂದು ಹೇಳಿದ್ದರು. ಅಂತೆಯೇ ದೂರಿನಲ್ಲಿ ಮಹಿಳೆ ಉದ್ಯಮಿ ಗೋಯಲ್ ಹೆಸರನ್ನು ಹೊರತು ಪಡಿಸಿ ಉಳಿದವರ ಹೆಸರನ್ನು ಹೇಳಿಲ್ಲ ಎಂದು ರಾಜಸ್ಥಾನ ಪೊಲೀಸ್ ಉಪಾಯುಕ್ತ ಅಸ್ಲಮ್ ಖಾನ್ ತಿಳಿಸಿದ್ದಾರೆ.

ಹಣ ಪಡೆಯುವ ನೆಪದಲ್ಲಿ ಆರೋಪಿಗಳ ಹಿಡಿದುಕೊಟ್ಟ ಸಂತ್ರಸ್ಥ ಮಹಿಳೆ
ಇನ್ನು ಈ ಹಿಂದೆ ಅತ್ಯಾಚಾರದ ಬಳಿಕ ಉದ್ಯಮಿಗಳು ಮಹಿಳೆಗೆ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು. ಅಲ್ಲದೆ ತನಗೆ 5 ಕೋಟಿ ಹಣ ನೀಡುವ ಆಮಿಷ ಒಡ್ಡಿದ್ದರು. ಈ ಸಂಬಂಧ ಹಣ ಪಡೆಯಲು ಬರುತ್ತೇನೆ ಎಂದು ಮಹಿಳೆ ತಿಳಿಸಿದ್ದರು. ಭಾನುವಾರ ಉದ್ಯಮಿಯ ಕಚೇರಿಗೆ ಮಹಿಳೆ ಆಗಮಿಸಿದ್ದ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ಮಹಿಳೆಯ ದೂರಿನ ಅನ್ವಯ ದೆಹಲಿ ಪೊಲೀಸರು ರಿಂಗಿಂಗ್ ಬೆಲ್ಸ್ ಸಂಸ್ಥೆಯ ಪಾಲುದಾರ ಉದ್ಯಮಿ ಮೋಹಿತ್ ಗೋಯಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.