ರಾಷ್ಟ್ರೀಯ

ಮೋದಿ ಹತ್ಯೆಗೆ ಗಡ್ಕರಿ ಸಂಚು ಎಂದು ಟ್ವೀಟ್ ಮಾಡಿದ ಜೆಎನ್ ಯು ನಾಯಕಿ!

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಮಾವೋವಾದಿ ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿಯ ಬೆನ್ನಲ್ಲೇ ಪ್ರಧಾನಿ ಮೋದಿ ಹತ್ಯೆಗೆ ಆರ್‌ಎಸ್‌ಎಸ್‌ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂದಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದ ಶೆಹ್ಲಾ ರಶೀದ್ ವಿರುದ್ಧ ಗಡ್ಕರಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಟ್ವೀಟ್ ಮಾಡಿ, ಮೋದಿ ಹತ್ಯೆಗೆ ನಿತಿನ್ ಗಡ್ಕರಿ ಸಂಚು ರೂಪಿಸಿದ್ದಾರೆ. ನಂತರ ಅವರು ಮುಸ್ಲಿಮರ ಮೇಲೆ ಆರೋಪ ಹೊರಿಸಲಿದ್ದಾರೆ ಎಂದಿದ್ದರು.

ಸಮಾಜ ವಿರೋಧಿ ಟ್ವೀಟ್ ಹಿನ್ನೆಲೆಯಲ್ಲಿ ಮತ್ತು ಪ್ರಧಾನಿ ಭದ್ರತೆ ಕುರಿತು ಶಾಂತಿ ಕದಡುವ ಸಂದೇಶ ಪೋಸ್ಟ್ ಮಾಡಿ ಸಾಮಾಜಿಕ ತಾಣ ದುರುಪಯೋಗ ಪಡಿಸಿಕೊಂಡ ಕುರಿತು ಸಚಿವ ಗಡ್ಕರಿ ದೂರು ದಾಖಲಿಸಲು ಮುಂದಾಗಿದ್ದಾರೆ.

ಮೋದಿ ಹತ್ಯೆಗೆ ನಕ್ಸಲರು ಹಲವು ಬಾರಿ ಸಂಚು ರೂಪಿಸಿರುವುದನ್ನು ಕಳೆದ ಶುಕ್ರವಾರ ಪುಣೆ ಪೊಲೀಸರು ಪತ್ತೆಹಚ್ಚಿದ್ದರು. ಈ ವಿಚಾರವನ್ನು ಹಗುರವಾಗಿ ಪರಿಗಣಿಸಿದ ಶೆಹ್ಲಾ ಟ್ವೀಟ್ ಮಾಡಿ ಗಡ್ಕರಿಯೇ ಮೋದಿ ಹತ್ಯೆಗೆ ಮುಂದಾಗಿದ್ದಾರೆ ಎಂದಿದ್ದರು.

ಸಚಿವರು ಕಾನೂನು ಕ್ರಮದ ಎಚ್ಚರಿಕೆ ನೀಡುತ್ತಲೇ ಶೆಹ್ಲಾ ತನ್ನ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದು, ಗಡ್ಕರಿ ವಿರುದ್ಧ ಆರೋಪ ಮಾಡಿಲ್ಲ ಎಂದಿದ್ದಾರೆ.

Comments are closed.