ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ ಇಟ್ಟ ಪರಿಣಾಮ ಮೂರು ಶಿಶುಗಳ ಸಾವು

Pinterest LinkedIn Tumblr

ಲಖನೌ: ಉತ್ತರ ಪ್ರದೇಶದಲ್ಲಿ ಮತ್ತೊಂದು ವೈದ್ಯರ ನಿರ್ಲಕ್ಷ್ಯ ಪ್ರಕರಣ ಬೆಳಕಿಗೆ ಬಂದಿದೆ. ಲಖನೌನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಾಲ್ಕು ಶಿಶುಗಳಿಗೆ ಒಂದೇ ಆಕ್ಸಿಜನ್ ಸಿಲಿಂಡರ್ ಇಡಲಾಗಿದೆ. ಇದರಿಂದಾಗಿ ಅಗತ್ಯವಾದಷ್ಟು ಪ್ರಮಾಣದಲ್ಲಿ ಆಮ್ಲಜನಕ ಸಿಗದೆ ಮೂರು ಶಿಶುಗಳು ಸಾವನ್ನಪ್ಪಿವೆ.

ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಈ ಶಿಶುಗಳು ಸಾವನ್ನಪ್ಪಿವೆ ಎಂದು ಪೋಷಕರು ಆರೋಪಿಸಿದ್ದಾರೆ. ಆದಾಗ್ಯೂ, ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆ ಆಡಳಿತ ಮಂಡಳಿ, ಹೃದಯ ಸಂಬಂಧಿತ ತೊಂದರೆಯಿಂದಾಗಿ ಕೇವಲ ಒಂದೇ ಮಗು ಸಾವನ್ನಪ್ಪಿರುವುದಾಗಿ ಹೇಳುತ್ತಿದೆ.

ಹೃದಯಾಘಾತದಿಂದ ಕೇವಲ ಒಂದೇ ಒಂದು ಮಗು ಸಾವನ್ನಪ್ಪಿದೆ. ಉಳಿದ ಮೂರು ಶಿಶುಗಳಿಗೆ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮಾಧ್ಯಮ ಸಂಚಾಲಕ ಡಾ. ಸುದೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Comments are closed.