ರಾಷ್ಟ್ರೀಯ

8ನೇ ದಿನ ಪೆಟ್ರೋಲ್‌ 11 ಪೈಸೆ, ಡೀಸಿಲ್‌ 8 ಪೈಸೆ ಇಳಿಕೆ

Pinterest LinkedIn Tumblr


ಹೊಸದಿಲ್ಲಿ : ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆಗಳು ಇಳಿಯಬೇಕೆಂದು ಬಯಸುವ ನಾಗರಿಕರಿಗೆ ಈಗ ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪವೇ ಹೆಚ್ಚು ನೆಮ್ಮದಿ ಸಿಗುತ್ತಿದೆ. ಇದಕ್ಕೆ ಪೂರಕವಾಗಿ ಇಂದು ಬುಧವಾರ ದೇಶದಲ್ಲಿ ಪೆಟ್ರೋಲ್‌ ಬೆಲೆ ಲೀಟರಿಗೆ 11 ಪೈಸೆ ಮತ್ತು ಡೀಸಿಲ್‌ ಬೆಲೆ ಲೀಟರಿಗೆ 8 ಪೈಸೆ ಇಳಿದಿದೆ.

ನಿರಂತರ ಎಂಟನೇ ದಿನವಾಗಿ ಇಂದು ಬುಧವಾರ ಪೆಟ್ರೋಲ್‌, ಡೀಸಿಲ್‌ ಬೆಲೆಗಳು ಇಳಿದಿವೆ. ಈ ಎಂಟು ದಿನಗಳಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 70 ಪೈಸೆ ಮತ್ತು ಡೀಸಿಲ್‌ ಬೆಲೆ 50 ಪೈಸೆ ಇಳಿದಿದೆ.

ಕರ್ನಾಟಕ ವಿಧಾನಸಭಾ ಚುನವಾಣೆ ಪ್ರಯುಕ್ತ 19 ದಿನಗಳ ಕಾಲ ದೈನಂದಿನ ಇಂಧನ ಬೆಲೆ ಪರಿಷ್ಕರಣೆಯನ್ನು ತಡೆ ಹಿಡಿದಿದ್ದ ತೈಲ ಮಾರಾಟ ಕಂಪೆನಿಗಳು ಮೇ 14ರಿಂದ ಮತ್ತೆ ಪರಿಷ್ಕರಣೆ ಕಾಯಕವನ್ನು ಆರಂಭಿಸಿದ್ದವು. ಪರಿಣಾವಾಗಿ 14 ದಿನಗಳ ಅವಧಿಯಲ್ಲಿ ಪೆಟ್ರೋಲ್‌ ಲೀಟರ್‌ ಬೆಲೆ 3.64 ಮತ್ತು ಡೀಸಿಲ್‌ ಲೀಟರ್‌ ಬೆಲೆ 3.24 (ದಿಲ್ಲಿಯಲ್ಲಿ) ಏರಿದ್ದವು.

Comments are closed.